ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಪ್ರತಿಭಟನೆ

ಉಳ್ಳಾಲ: ಹಾಲಿನ ದರವನ್ನು ಏರಿಸುವ ಮೂಲಕ ರಾಜ್ಯದ ಮಕ್ಕಳಿಗೆ ಹಾಲು ಕುಡಿಯದಂತೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ನೀತಿಯಿಂದಾಗಿ ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ಬಳಲಿದ್ದಾರೆ. ಹಿಂದೆ ಮಕ್ಕಳಲ್ಲಿ ಇದ್ದಂತಹ ನ್ಯೂನ್ಯತೆಗಳು ಮತ್ತೆ ಮರುಕಳಿಸಲಿದೆ ಎಂದು ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಹೇಳಿದರು.

ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ವತಿಯಿಂದ ಹಾಲಿನ ದರ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ತೊಕ್ಕೊಟ್ಟು ಫ್ಲೈಓವರ್ ನಡಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಮಾಜಿ ಆಸಕ ಜಯರಾಮ ಶೆಟ್ಟಿ ಮಾತನಾಡಿ, ತಂದೆ-ಮಗ ಇಬ್ಬರೂ ಉಳ್ಳಾಲವನ್ನು 30 ವರ್ಷಕ್ಕಿಂತ ಅಧಿಕ ಆಡಳಿತ ನಡೆಸುತ್ತಿದ್ದರೂ ನೈಜ ಸಮಸ್ಯೆ ಸಮುದ್ರ ಕೊರೆತ, ಕುಡಿಯುವ ನೀರಿನ ಕಾಳಜಿ ವಹಿಸಿಕೊಂಡವರಲ್ಲ. ಸ್ಪೀಕರ್ ಅವರಿಗೆ ಸಚಿವರಿಗೆ ಆದೇಶಿಸುವಷ್ಟು ಬಲವಿದ್ದರೂ, ಉಳ್ಳಾಲ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳಲ್ಲು ತರಲಾರದೆ ದುರ್ಬಲರಾಗಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮುಖವನ್ನು ಅಳವಡಿಸಿ ನಂದಿನಿ ಹಾಲಿನ ಪ್ಯಾಕೆಟಿನ ಮಾಲೆಯನ್ನು ಹಾಕಿ , ಮಹಿಳಾ ಕಾರ್ಯಕರ್ತೆಯರು ಚೆಂಬು ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಈ ಸಂದರ್ಭ ಬಾಲವನ ನಿಗಮದ ಮಾಜಿ ಅಧ್ಯಕ್ಷೆ ಸುಲೋಚನ ಜಿ.ಕೆ.ಭಟ್, ಮಂಡಲದ ಪ್ರಭಾರ ಅಧ್ಯಕ್ಷರಾದ ಹೇಮಂತ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ, ಮಂಡಲದ ಪ್ರಭಾರಿ ದಿನೇಶ್ ಅಮ್ಟೂರ್, ರಾಜ್ಯ ಮೀನುಗಾರರ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾದ ಯಶವಂತ ಅಮೀನ್,ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಖಿತಾ ಆರ್.ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

add - TMA pai

Related Posts

Leave a Reply

Your email address will not be published.