ಕುಡುಕನೊಬ್ಬನ ಹತ್ತು ಲಕ್ಷದ ಕಥೆ

ನ.27ರಂದು ನಗರದ ಪಂಪ್ವೆಲ್ ಬಳಿ ಕನ್ಯಾಕುಮಾರಿ ಮೂಲದ ಪಿ. ಶಿವರಾಜ್ (49) ಎಂಬುವವರಿಗೆ ಬಿದ್ದುಕೊಂಡಿದ್ದ ಹತ್ತು ಲಕ್ಷ ರೂಪಾಯಿಯ ನೋಟಿನ ಕಟ್ಟು ಸಿಕ್ಕಿದೆ. ಇವರು ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು ಬೋಂದೇಲ್‌ನ ಕೃಷ್ಣನಗರದಲ್ಲಿ ವಾಸವಾಗಿದ್ದಾರೆ.ಇವರು ನ.27ರಂದು ಎಂದಿನಂತೆ ಕುಡಿಯುತ್ತಾ ಪಂಪ್‌ವೆಲ್ ಮೇಲ್ಸೇತುವೆ ಬಳಿ ಬೀಡಿ ಸೇದುತ್ತಾ ನಿಂತಿದ್ದರು. ಅಲ್ಲಿನ  ಪಾರ್ಕಿಂಗ್ ಸ್ಥಳದಲ್ಲಿ ಇಂದು ಚೀಲ ಬಿದ್ದಿತ್ತು. ಅಲ್ಲೇ ಇದ್ದ ಕೂಲಿ ಕಾರ್ಮಿಕ ಚೀಲ ಹಾಗೂ ಶಿವರಾಜ್‌ನನ್ನೇ ಬಹು ಸೂಕ್ಷ್ಮವಾಗಿ ಗಮನಿಸುತ್ತಿದ್ದ.

ಇನ್ನು ಮುಂದೆ ಅವಾಂತರಗಳಾಗುವುದು ಬೇಡ ಎಂದು ಶಿವರಾಜ್ ಆ ಚೀಲವನ್ನು ತೋರಿಸುತ್ತಾನೆ. ಇಬ್ಬರೂ ಚೀಲವನ್ನು ಓಪನ್ ಮಾಡಿದಾಗ 500 ರೂ. ನೋಟುಗಳಿರುವ ನೋಟಿನ ಕಂತೆ ನೋಡಿ ಶಾಕ್ ಆಗಿದ್ದಾರೆ.ಅದೇ ನೋಟಿನ ಕಟ್ಟಿನಲ್ಲಿ ಒಂದು ಸಾವಿರ ರೂ ನಲ್ಲಿ ಮತ್ತೆ ಕುಡಿದು ಟೈಟಾಗಿದ್ದಾರೆ. ಕುಡಿದು ಟೈಟಾಗಿ ಉಳ್ಳಾಲ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೂಲಿ ಕಾರ್ಮಿಕ ಇದ್ರಲ್ಲಿ ನನಗೇನು ಕೊಡೋದಿಲ್ಲವಾ…? ಎಂದು ಪ್ರಶ್ನೆ ಮಾಡುತ್ತಾನೆ.ನಶೆಯಲ್ಲಿದ್ದ ಶಿವರಾಜ್ ಅವನಿಗೂ ಒಂದು ಬಂಡಲ್ ನೋಟು ಆತನ ಕೈಗಿಡುತ್ತಾನೆ. ಅದ್ಯಾಕೋ ಅಮಲು ನಿಂತಿಲ್ಲ, ನಶೆ ಇಳಿದಿಲ್ಲ. ಮತ್ತೆ ಹೊಟೇಲಿಗೆ ಹೋಗಿ ಉದರವನ್ನೂ ತುಂಬಿಸಿಕೊಂಡ.

ಇಷ್ಟರಲ್ಲಿ ಯಾರೊ ಕೊಟ್ಟ ಮಾಹಿತಿಯಂತೆ ಪೊಲೀಸರು ಆತನಿದ್ದ ಜಾಗಕ್ಕೆ ಬಂದು ಠಾಣೆಗೆ ಅವನನ್ನು ಕರೆದುಕೊಂಡು ಹೋದರು. ಆದರೆ ಇದೆಲ್ಲಾ ನಡೆಯುವ ಮೊದಲೇ ಪಾಲಿಗೆ ಬಂದದ್ದೇ ಮೃಷ್ಟಾನ್ನ’ ಎಂಬಂತೆ ಕೂಲಿ ಕಾರ್ಮಿಕ ಕೈಗೆ ಬಂದ ಹಣವನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.
ಇನ್ನು ಪೊಲೀಸರು ಶಿವರಾಜ್‌ನನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ನಡೆದ ವಿಷಯವನ್ನು ವಿವರಿಸುತ್ತಾರೆ.ಇದೀಗ ಮೂರು ದಿನದ ಬಳಿಕ ಶಿವರಾಜ್‌ನನ್ನು ಪೊಲೀಸರು ಠಾಣೆಯಿಂದ ಹೊರಬಿಟ್ಟಿದ್ದಾರೆ.ಹಣ ಕಂಕನಾಡಿ ಠಾಣೆಯಲ್ಲಿ ಭದ್ರವಾಗಿದೆ.

Related Posts

Leave a Reply

Your email address will not be published.