ಆಯುರ್ವೇದ ಚಿಕಿತ್ಸೆ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಪದವಿನಂಗಡಿಯ”ಪುನರ್ವಸು” ಆಯುರ್ವೇದ ಕ್ಲಿನಿಕ್

ಮಂಗಳೂರಿನ ಪದವಿನಂಗಡಿಯಲ್ಲಿರುವ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಔಷಧ ಮಳಿಗೆ ಹಾಗೂ ಪುನರ್ವಸು ಆಯುರ್ವೇದ ಕ್ಲೀನಿಕ್ ರೋಗಿಗಳ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಬೆಳಗ್ಗೆ 10ರಿಂದ ಸಾಯಂಕಾಲ 7ರ ವರೆಗೆ ಕಾರ್ಯ ನಿರ್ವಹಿಸುತ್ತದೆ.

ವೈದ್ಯಕೀಯ ಸಲಹೆ ಹಾಗೂ ಸಮಾಲೋಚನೆಗೆ ವೈದ್ಯೆ ಡಾ ಸೌಮ್ಯಶ್ರೀ ಕೆ. ಎಂ ಇವರು ಲಭ್ಯರಿರುತ್ತಾರೆ. ಅಲರ್ಜಿ, ಥೈರಾಯಿಡ್, ಮಧುಮೇಹ, ಕೊಲೆಸ್ಟ್ರಾಲ್, ಬೊಜ್ಜು, ಬಂಜೆತನ, ಸ್ತ್ರೀ ರೋಗಗಳು, ಡಿಸ್ಕ್‍ನ ಸಮಸ್ಯೆ, ವಾತ ರೋಗಗಳು, ಮುಂತಾದ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ಲಭ್ಯವಿದೆ.ಇದಲ್ಲದೆ, ಅಪೆಂಡಿಕ್ಸ್, ಪಿತ್ತ ಕೋಶದ ಕಲ್ಲು, ಮೂತ್ರ ಕೋಶದ ಕಲ್ಲು, ಲಿವರ್ ಸಂಬಂಧಿಸಿದ ಖಾಯಿಲೆ, ಬೆನ್ನು ಮೂಳೆಯ ಸಮಸ್ಯೆ, ಮೊಣಕಾಲು ನೋವು ಮುಂತಾದ ಸಮಸ್ಯೆಗಳಿಗೆ ಶಸ್ತ್ರ ಚಿಕಿತ್ಸೆಯಿಲ್ಲದೇ ಚಿಕಿತ್ಸೆ ನೀಡಲಾಗುವುದು.

punarvasu ayurveda clinic

ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾದ ಎಲ್ಲಾ ಔಷಧಿಗಳು ಇಲ್ಲಿ ಲಭ್ಯವಿದೆ. ದೇಸಿ ಹಸುವಿನ ತುಪ್ಪ, ಶುದ್ಧ ಜೇನು, ಹಿಂಗು, ಶುಂಠಿ, ಬಜೆ, ಜೇಷ್ಠಮಧು, ಏಲಕ್ಕಿ, ಲವಂಗ, ಕೆಂಪು ಚಂದನ, ಭದ್ರ ಮುಷ್ಠಿ ಮುಂತಾದ ಔಷಧಗಳು ಕೂಡಾ ಇಲ್ಲಿ ಲಭ್ಯವಿದೆ. ಪ್ರತೀ ತಿಂಗಳ ಪುಷ್ಯ ನಕ್ಷತ್ರದಂದು ಹುಟ್ಟಿದ ಮಗುವಿನಿಂದ ಹಿಡಿದು 16 ನೇ ವರ್ಷದ ವರೆಗಿನ ಮಕ್ಕಳಿಗೆ ಸ್ವರ್ಣ ಬಿಂದು ಪ್ರಾಶನ ಕೂಡಾ ಲಭ್ಯವಿದೆ.

punarvasu ayurveda clinic

ಇಲ್ಲಿಯ ಚಿಕಿತ್ಸೆಯ ವಿಶೇಷತೆಗಳು ಸಂಪೂರ್ಣವಾಗಿ ಶಾಸ್ತ್ರೀಯ ರೀತಿಯಲ್ಲಿ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗದ ದಮನ ಮಾಡದೆ ಶಮನಗೊಳಿಸುವುದು ನಮ್ಮ ಚಿಕಿತ್ಸೆಯ ವಿಶೇಷತೆಯನ್ನು ಹೊಂದಿದೆ. ಅತೀ ಕಡಿಮೆ ಪ್ರಮಾಣದ ಔಷಧಿ ಪ್ರಯೋಗ , ಪಥ್ಯ ಆಹಾರದ ಬಗ್ಗೆ ಸಂಪೂರ್ಣ ಮಾಹಿತಿ, ಎಲ್ಲಾ ತರದ ಜ್ವರಗಳಿಗೆ ಅತ್ಯಂತ ಕ್ಲಪ್ತ ಸಮಯದಲ್ಲಿ ಆಸ್ಪತ್ರೆ ವಾಸವಿಲ್ಲದೆ ಚಿಕಿತ್ಸೆ. ರೋಗದಿಂದ ಮುಕ್ತಿಯ ಜೊತೆಗೆ ಪರಿಪೂರ್ಣ ಆರೋಗ್ಯ ಲಾಭವನ್ನು ಪಡೆದುಕೊಳ್ಳಬಹುದು.

Related Posts

Leave a Reply

Your email address will not be published.