ಪುರಿ ಜಗನ್ನಾಥ ರಥೋತ್ಸವ ನೂಕು ನುಗ್ಗಲು
ಪುರಿ ಜಗನ್ನಾಥ ದೇವಾಲಯದ ರಥೋತ್ಸವದಲ್ಲಿ ನೂಕು ನುಗ್ಗಲಿನಲ್ಲಿ ಒಬ್ಬ ಸತ್ತುದರಿಂದ ತೇರು ಎಳೆಯುವುದನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ತೇರು ಎಳೆಯುವ ಸಮಯದಲ್ಲಿ ಹೆಚ್ಚು ಭಕ್ತರು ಸೇರಿದ್ದರು. ರಥ ಎಳೆಯಲು ಮುನ್ನುಗ್ಗಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಒಬ್ಬ ಉಸಿರು ಕಟ್ಟಿ ಸತ್ತರೆ ಹಲವರು ಕೆಳಕ್ಕೆ ಬಿದ್ದು ಗಾಯಗೊಂಡರು. ಒಬ್ಬಿಬ್ಬರು ಗಂಭೀರ ಎಂದು ತಿಳಿದು ಬಂದಿದೆ.
ಭಾನುವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಜಿ ಅವರು ಪುರಿ ಜಗನ್ನಾಥನ ದರ್ಶನ ಪಡೆದರು.