ತನ್ನ ಗಾಯನದ ಮೂಲಕ ವೈರಲ್ ಆಗಿರುವ ಬಾಲಕಿ ಶಾಲ್ಮಿಲಿ ಕೃಷ್ಣ ಸನ್ನಿಧಿಯಲ್ಲಿ ಸಂಗೀತ ಸೇವೆ ನಡೆಸಿದ ಶಾಲ್ಮಿಲಿ
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಗಾಯನದ ಮೂಲಕ ವೈರಲ್ ಆಗಿರುವ ಬಾಲಕಿ ಶಾಲ್ಮಿಲಿ ಶ್ರೀನಿವಾಸ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದಳು.
ಡಿಡಿ ಆಡ್ಯಾನೆ ರಂಗ ಹಾಡನ್ನು ಹಾಡಿರುವ ಈ ಪುಟಾಣಿ ಮಗು, ಕೃಷ್ಣ ಸನ್ನಿಧಿಯಲ್ಲಿ ಸಂಗೀತ ಸೇವೆ ನಡೆಸಿದ್ದಾಳೆ.
ಯೂಟ್ಯೂಬ್‌ನಲ್ಲಿ ಹತ್ತು ಮಿಲಿಯಕ್ಕೂ ಹೆಚ್ಚು ವೀಕ್ಷಣೆಗೊಂಡ ಡೀ ಡೀ ಆಡ್ಯಾನೇ ರಂಗ ಎಂಬ ದಾಸರಪದ ಎಲ್ಲರ ಮೆಚ್ಚುಗೆ ಗಳಿಸಿತ್ತು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಪುಟ್ಟ ಬಾಲಕಿಗೆ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಕುಮಾರಿ ಶಾಲ್ಮಲೀ ಶ್ರೀನಿವಾಸ್ ಕೃಷ್ಣಮಠದ ಚಂದ್ರಶಾಲೆಯಲ್ಲಿ ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ ರಾತ್ರಿಯ ಅಷ್ಟಾವಧಾನ ಸೇವೆಯಲ್ಲಿ ಭಾಗಿಯಾಗಿ ಸಂಗೀತ ಸೇವೆ ನೀಡಿದ್ದಾಳೆ. ಈ ಮೂಲಕ ನೆರೆದ ಭಕ್ತಾದಿಗಳ ಮನಸೂರೆಗೊಂಡು ಕೃಷ್ಣನಿಗೆ ಸಮರ್ಪಿಸಿ ನಂತರ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದಿದ್ದಾಳೆ.