ಬಸ್‍ನಲ್ಲಿ ಅಧಿಕಾರಿಯ ಪರ್ಸ್ ಕದ್ದ ಮಹಿಳೆ : ವೀಡಿಯೋ ವೈರಲ್

ಪುತ್ತೂರು : ಪುತ್ತೂರಿಗೆ ಬರುವ ಖಾಸಗಿ ಬಸ್ ನಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಮತ್ತೊಂದು ಮಹಿಳೆಯ ಪರ್ಸ್ ಕದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಪರ್ಸ್ ಕಳೆದುಕೊಂಡ ಪುತ್ತೂರು ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಸುಕನ್ಯ ಪುತ್ತೂರು ಠಾಣೆಗೆ ಸಿಸಿಟಿವಿ ದೃಶ್ಯ ಆಧರಿಸಿ ದೂರು ನೀಡಿದ್ದು, ಕಳ್ಳತನಗೈದ ಮಹಿಳೆಗಾಗಿ ಪೆÇಲೀಸರು ಹುಡುಕಾಟ ಪ್ರಾರಂಭಿಸಿದ್ದರೆ. ಆದರೆ ಹುಡುಕಾಟಕ್ಕೆ ಖಾಸಗಿ ಬಸ್ ಬಸ್ಸಿನೊಳಗೆ ಅಳವಡಿಸಿದ್ದ ಸಿಸಿಟಿವಿಯ ದೃಶ್ಯವೇ ಪ್ರಮುಖ ಸಾಕ್ಷಿಯಾಗಿದೆ.

ಸುಕನ್ಯ ಅವರು ಮಂಗಳೂರಿನಿಂದ ಪ್ರತಿದಿನ ಬಸ್ ನಲ್ಲಿ ಪುತ್ತೂರು ತಾಲೂಕು ಪಂಚಾಯಿತಿಗೆ ಬರುತ್ತಿದ್ದಾರೆ. ಸೆ.20ರಂದು ಮಹೇಶ್ ಬಸ್ ನಲ್ಲಿ ಬರುತಿದ್ದಾಗ ಕಲ್ಲಡ್ಕದಲ್ಲಿ ಒಬ್ಬ ಮಹಿಳೆ ಬಸ್ ಗೆ ಹತ್ತಿ ಅವರ ಪಕ್ಕದಲ್ಲೇ ಕುಳಿತರು. ಆ ಮಹಿಳೆಯ ನಡೆಗಳಿಂದ ಅನುಮಾನಗೊಂಡ ಸುಕನ್ಯರವರು ತನ್ನ ಬ್ಯಾಗನ್ನು ಗಟ್ಟಿ ಹಿಡ್ಕೊಂಡು ಮತ್ತೊಂದು ಕೈಯಲ್ಲಿ ಟೀಫೀನ್ ಹಿಡ್ಕೊಂದು ಪುತ್ತೂರು ಪೆÇೀಸ್ಟ್ ಆಫೀಸ್ ತಂಗುದಾಣದ ಬಳಿ ಸುಕನ್ಯ ಅವರು ಇಳಿದರು.ತಾ.ಪಂ ಗೆ ನಡೆದುಕೊಂಡು ಹೋಗುವಾಗ ಮೆಡಿಕಲ್ ನಲ್ಲಿ ಮಾತ್ರೆ ಖರೀದಿಗೆಂದು ಪರ್ಸ್ ತಡಕಾಡಿದಾಗ ಬ್ಯಾಗ್ ಝಿಪ್ ಓಪನ್ ಆಗಿ ಪರ್ಸ್ ಕಳ್ಳತನವಾಗಿರುವುದು ಗೊತ್ತಾಗಿದೆ.ತನ್ನ ಮೊಬೈಲ್ ನಲ್ಲಿ ಈ ಹಿಂದೆ ಅವರು ಬರುತ್ತಿದ್ದ ಬಸ್ ನ ಚಾಲಕನ ಪೆÇೀನ್ ನಂಬರ್ ಒಂದಿದ್ದು, ಅದಕ್ಕೆ ಕರೆ ಮಾಡಿ ಇಂತಹ ಸಮಯದ ಮಹೇಶ್ ಬಸ್ ನಲ್ಲಿ ತಾನೂ ಬಂದಿರುವುದು ಅದರಲ್ಲಿ ಎಂದು ಮಾಹಿತಿ ನೀಡಿದಾಗ ಅದರಲ್ಲಿ ಸಿಸಿಟಿವಿ ಇದೆ ಎಂಬ ಮಾಹಿತಿ ನೀಡಿದರು.ನಂತರ ಪುತ್ತೂರು ನಗರ ಠಾಣೆಗೆ ದೂರು ನೀಡಿದ ಸುಕನ್ಯ ಅವರು ಸಿಸಿಟಿವಿ ಇರುವ ಬಗ್ಗೆ ಮಾಹಿತಿ ನೀಡಿದರು. ಪ್ರಯಾಣಿಕರ ಭದ್ರತೆಯ ದೃಷ್ಟಿಯಿಂದ ನಾವು ಸಿಸಿಟಿವಿ ಬಸ್ ಗೆ ಹಾಕಿದ್ದೇವೆ. ಬಸ್ ಪ್ರಯಾಣಿಕರಿಂದ ತುಂಬಿರುವಾಗ ಈ ತರಹ ಕಳ್ಳತನಗಳು ಹೆಚ್ಚಾಗಿರ್ತದೆ. ಪ್ರಯಾಣಿಕರು ಆದಷ್ಟು ತಮ್ಮ ಗಮನ ಜಾಸ್ತಿ ಕೊಡುತ್ತಿರಬೇಕು. ಹಲವು ಪ್ರಕರಣಗಳು ಸಿಸಿಟಿವಿ ಹಾಕಿದ ನಂತರ ಪತ್ತೆಯಾಗಿದೆ ಎಂದು ನಿಖರ ನ್ಯೂಸ್ ಗೆ ಮಹೇಶ್ ಬಸ್ ಮಾಲಕ ಪ್ರಕಾಶ್ ಶೆಟ್ಟಿ ತಿಳಿಸಿದರು.