ಸರ್ಕಾರಿ ಬಸ್ ಗೆ ಪುತ್ತೂರಿನ ಬೊಳುವಾರಿನಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ – ಬಸ್ ಗಾಜು ಪುಡಿ ಪುಡಿ

ಪುತ್ತೂರಿನ ಬೊಳುವಾರಿನ ವಿಶ್ವ ಕರ್ಮ ಸಭಾ ಭವನದ ಮುಂಭಾಗ ಸರ್ಕಾರಿ ಬಸ್ ಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡಸಿದ್ದಾರೆ. ಇದೀಗ ಪುತ್ತೂರಿನ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಮಾರ್ಗಗಳಲ್ಲಿ ಬಸ್ ನ್ನು ಸಂಚಾರ ತಡೆ ಹಿಡಿಯಲಾಗಿದೆ. ದೂರದೂರುಗಳಿಗೆ ಸಂಚರಿಸುವ ಪ್ರಯಾಣಿಕರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಬಸ್ ಸಂಚಾರದ ಬಗ್ಗೆ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ಇರಲಿಲ್ಲ. ಈ ನಡುವೆ ಜನವಶ್ಯಕವಾದ ಬಸ್’ಗಳು ಸಂಚಾರ ಪುತ್ತೂರು – ಮಂಗಳೂರು ನಡುವೆ ಬೆಳಗ್ಗಿನಿಂದಲೇ ಎಂದಿನಂತೆ ಸಂಚಾರ ಆರಂಭಿಸಿದ್ದವು. ಇದೀಗ ಸರ್ಕಾರಿ ಬಸ್ ಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದಿದೆ.