ಪುತ್ತೂರು ಕೇಬಲ್ ಟಿವಿ, ವರದಿಗಾರ,ಪುತ್ತೂರು ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಸದಸ್ಯ ಸೋನಿ ಗೋನ್ಸಾಲ್ವಿಸ್ ನಿಧನ

ಪುತ್ತೂರು ಕೇಬಲ್ ಟಿವಿ, ವರದಿಗಾರ,ಪುತ್ತೂರು ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಸದಸ್ಯ,ಕಂಪ್ಯೂಟರ್ ತಂತ್ರಜ್ಞಾನದ ಮಾಂತ್ರಿಕ ಸೋನಿ ಗೋನ್ಸಾಲ್ವಿಸ್ ನಿಧನ.
ಪುತ್ತೂರು: ಕೇಬಲ್ ಟಿ.ವಿ ಮತ್ತು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ವಿಶೇಷ ಪರಿಣಿತಿ ಹೊಂದಿದ್ದ ಬೊಳುವಾರು ಉರ್ಲಾಂಡಿ ನಿವಾಸಿ ಸೋನಿ ಗೋನ್ಸಾಲ್ವಿಸ್ (55ವ) ರವರು ಜು.30 ರ ನಸುಕಿನ ಜಾವ ನಿಧನರಾದರು.
ಅನಾರೋಗ್ಯದಿಂದ ಬಳಲುತಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತರಲಾಯಿತು.ಇಂದು ನಸುಕಿನ ಜಾವ ನಿಧನರಾದರು. ಅವರು ಹಲವಾರು ವರ್ಷ ಕೇಬಲ್ ಟಿ ವಿ ಯಲ್ಲಿ ಕೆಲಸ ನಿರ್ವಹಿಸಿದ್ದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಸದಸ್ಯರು, ಪೊಟೋ ಗ್ರಾಫ್ ಎಸೋಸಿಯೇಶನ್ ನ ಮಾಜಿ ಸದಸ್ಯರೂ ಅಗಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಇಂದು ಸಂಜೆ ಮೃತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.