ರಸ್ತೆ ಕಾಮಗಾರಿ ಅವ್ಯವಸ್ಥೆ – ಪುತ್ತೂರು ಶಾಸಕರಿಂದ ಅಧಿಕಾರಿಗಳಿಗೆ ತರಾಟೆ
ಪುತ್ತೂರು: ಉಪ್ಪಿನಂಗಡಿ-ಪುತ್ತೂರು ರಸ್ತೆ ಕಾಮಗಾರಿ ವಿಳಂಬವಾದ ಕಾರಣಕ್ಕೆ ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಅಧಿಕಾರಿ ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದ ಶಾಸಕ ಅಶೋಕ್ ಕುಮಾರ್ ರೈ, ಡ್ರೈನೇಜ್ ಮತ್ತು ಡಿವೈಡರ್ ಕಾಮಗಾರಿ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲ ಆರಂಭವಾದರೂ ಡ್ರೈನೇಜ್ ಸಮಸ್ಯೆ ಪರಿಹಾರ ಆಗದಿರುವುದು ಮತ್ತು ಮೂರು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಳ್ಳದಿರುವುದರಿಂದ ಅಸಮಾಧಾನಗೊಂಡ ಶಾಸಕರು “ನಿಮಗೆ ಆಗುತ್ತಾ ಇಲ್ವಾ ಹೇಳಿ, ಯಾವಾಗ ಕೆಲಸ ಮುಗಿಸ್ತೀರಿ” ಎಂದು ಪ್ರಶ್ನಿಸಿದರಲ್ಲದೆ ಕಾಮಗಾರಿ ತಕ್ಷಣ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟರು.