ಪುತ್ತೂರು : ಪ್ಲಾಸ್ಟಿಕ್ ಧ್ವಜ ಬಳಸದಂತೆ ಮನವಿ

ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜವನ್ನು ಮಾರಾಟ ಮಾಡುವುದಾಗಲಿ, ಬಳಸುವುದಾಗಲಿ, ಬೇಕರಿಗಳಲ್ಲಿ ರಾಷ್ಟ್ರಧ್ವಜದ ಕೇಕ್ ತಯಾರಿಸುವುದಾಗಲಿ ಮಾಡಬಾರದು ಎಂದು ಇಲ್ಲಿಯ ಹಿಂದೂ ಜನಜಾಗೃತಿ ವೇದಿಕೆ ಹಾಗೂ ಸನಾತನ ಸಂಸ್ಥೆಯ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಲಾಯಿತು.

ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ75ನೇ ವರ್ಷದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ, ಬಳಕೆ ಮಾಡಿದ ಬಳಿಕ ಎಲ್ಲೆಂದರಲ್ಲಿ ಎಸೆಯುವುದು ಮಾಡಬೇಡಿ. ಅಲ್ಲದೆ ಬೇಕರಿಗಳಲ್ಲಿ ಧ್ವಜ ಮಾದರಿಯಲ್ಲಿ ವಿವಿಧ ಬಣ್ಣಗಳನ್ನು ಬಳಸಿ ಕೇಕಸ್ ತಯಾರಿಕೆ ಮಾಡುವುದು ಇದು ರಾಷ್ಟ್ರಧ್ವಜಕ್ಕೆ ಮಾಡುವ ಅಪಮಾನ. ರಾಷ್ಟ್ರಧ್ವಜವನ್ನು ಗೌರವಿಸುವ ನಿಟ್ಟಿನಲ್ಲಿ ಎಲ್ಲರೂ ತಮ್ಮ ಮನೋಭಾವ ಬೆಳೆಸಿಕೊಳ್ಳಬೇಕು.ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಲಕ್ಷ?ಮಣ ಗೌಡ, ದಿನೇಶ್ ಜೈನ್, ನವೀನ್ ಆಚಾರ್ಯ, ಜಗದೀಶ್ ಶೆಟ್ಟಿ, ಶರತ್, ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕಾರ ಹರಿಪ್ರಸಾದ್ ರೈ, ಚಂದ್ರಶೇಖರ, ದಯಾನಂದ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.