ಪುತ್ತೂರು :ಮಾಜಿ ಪ್ರಧಾನಿ ಎಬಿ ವಾಜಪೇಯಿ ಅವರ ಪುಣ್ಯ ಸ್ಮರಣೆ

ಪುತ್ತೂರು: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ವ್ಯಕ್ತಿಯಾಗಿರದೆ ರಾಷ್ಟ್ರಕ್ಕೆ ಶಕ್ತಿಯಾಗಿದ್ದರು. ರಾಜಕೀಯವಾಗಿ ಜನಪ್ರತಿನಿಧಿ, ಕಾರ್ಯಕರ್ತ ಹೇಗಿರಬೇಕು ಎಂಬುದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅವರು ನುಡಿನಮನ ಸಲ್ಲಿಸಿದರು.

ವಾಜಪೇಯಿ ಅವರದ್ದು ಅಪರೂಪದ ವ್ಯಕ್ತಿತ್ವ. 3 ಬಾರಿ ಸುಮಾರು 6 ವರ್ಷ ಪ್ರಧಾನಿಯಾಗಿದ್ದ ಅವರು ಸರಕಾರವನ್ನೇ ಜನರ ಬಳಿಗೆ ಕೊಂಡೊಯ್ದವರು. ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣದಂತಹ ಅಭಿಯಾನದಂತಹ ಕ್ರಾಂತಿಕಾರಿ ಯೋಜನೆಗಳ ಮೂಲಕ ಜನರ ಹೃದಯಕ್ಕೆ ಹತ್ತಿರವಾದವರು ಎಂದರು.ವಂಶಾಡಳಿತ, ಭ್ರಷ್ಟಾಚಾರಗಳ ವಿರುದ್ಧವಾಗಿದ್ದ ವಾಜಪೇಯಿ ಅವರು, ದೇಶವನ್ನೇ ತನ್ನ ಮನೆ ಎಂಬಂತೆ ಪರಿಗಣಿಸಿ ದೇಶದ ಹಿತಕ್ಕಾಗಿ ನಿರಂತರ ದುಡಿದವರು. ಪಂಚಾಯತ್‍ಂದ ಪಾರ್ಲಿಮೆಂಟ್ ತನಕ ಭಾಜಪ ಪಕ್ಷವನ್ನು ಬೆಳೆಸಿದ ಹೆಗ್ಗಳಿಕೆ ಅವರದು ಎಂದು ಹೇಳಿದ ಶಾಸಕರು, ಆರಂಭದ ದಿನಗಳಲ್ಲಿ ಸಂಸತ್ತಿನತ್ಬಿಜೆಪಿಯ ಇಬ್ಬರು ಸದಸ್ಯರಿದ್ದಾಗ ಟೀಕೆಗಳಿಗೆ ಉತ್ತರಿಸಿ ಮುಂದೊಂದು ದಿನ ದೇಶವನ್ನು ಆಳುವ ಮಟ್ಟಕ್ಕೆ ಪಕ್ಷ ಬೆಳೆಯುತ್ತದೆ ಎಂದು ಸವಾಲು ಹಾಕಿದ್ದರು. ಮತ್ತು ಅದನ್ನುಪೂರ್ಣಗೊಳಿಸಿದ ಸಾಧನೆಯೂ ಅಪೂರ್ವ ಎಂದು ಮಠಂದೂರು ಹೇಳಿದರು.

ಬಳಿಕ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ವೇದಿಕೆಯಲ್ಲಿಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ,ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.