ಪುತ್ತೂರಿನ: ಬೈಕ್ ಸ್ಕೂಟರ್ ಮಧ್ಯೆ ಅಪಘಾತ: ಸ್ಕೂಟರ್ ಸವಾರ ಮೃತ್ಯು

ಪುತ್ತೂರು : ಬೈಕ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸ್ ನಿಲ್ದಾಣ ಕಟ್ಟಡದಲ್ಲಿರುವ ರೆಡ್ ಕ್ಲಬ್ ಪ್ರೀಮಿಯಮ್ ಬಟ್ಟೆ ಅಂಗಡಿಯ ಸಿಬ್ಬಂದಿ ನೌಷದ್ (20) ಮೃತಪಟ್ಟವರು. ಇವರು ಪುತ್ತೂರು ತಾಲೂಕು ಅರ್ಯಾಪು ಗ್ರಾಮದ ಸಂಪ್ಯದ ನಿವಾಸಿ ಅಬ್ದುಲ್ ಅಝೀಜ್ ಎಂಬವರ ಪುತ್ರ. ನೌಷದ್ ಅಕ್ಟಿವಾ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಮೃತನ ಸ್ನೇಹಿತರು, ಕುಟುಂಬಸ್ಥರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಘಟನಾ ಸ್ಥಳಕ್ಕೆ ಪುತ್ತೂರು ನಗರ ಸಂಚಾರಿ ಠಾಣೆಯ ಎಸ್‌ಐ ರಾಮ ನಾಯ್ಕ್ ಮತ್ತು ಸಿಬಂದಿಗಳು ತೆರಳಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.