ಪುತ್ತೂರು : ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕ್ಯಾ. ಬ್ರಿಜೇಶ್ ಚೌಟ

ಪುತ್ತೂರು: ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ತಮ್ಮ ಬಿಳಿ ಅಂಗಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂಗಿಯಲ್ಲಿ ಈಗ ಬಿಳಿ ಎಲ್ಲಿದೆ ಎಂದು ಹುಡುಕಬೇಕಿದೆ. ಬರೀ ಕಪ್ಪು  ಚುಕ್ಕೆಗಳೇ ತುಂಬಿವೆ ಎಂದು ಸಂಸದ ಕ್ಯಾö. ಬ್ರಿಜೇಶ್ ಚೌಟ ಆಪಾದಿಸಿದರು.

ಶನಿವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಅವರು, ದಲಿತ ಭೂಮಿಯನ್ನು ನುಂಗಿದ ಸಿದ್ದರಾಮಯ್ಯ ಅವರು ಅದನ್ನು ತಮ್ಮ ಪತ್ನಿಯ ಹೆಸರಿಗೆ ಬರೆದುಕೊಂಡಿದ್ದಲ್ಲದೆ, ಮುಡಾ ಸ್ವಾದೀನಪಡಿಸಿಕೊಂಡ ಬಳಿಕ ನಿಯಮ ಮೀರಿ ಹೆಚ್ಚುವರಿ ನಿವೇಶನ ಪಡೆದುಕೊಂಡು ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬಳಿಕ ಕೋರ್ಟ್ ಕೂಡ ಇದಕ್ಕೆ ಸಮ್ಮತಿಸಿದೆ. ಈಗ ಏನೇನೋ ನೆಪ ಹೇಳುವ ಬದಲು, ಅವರಿವರ ಮಾತು ಕೇಳುವ ಬದಲು ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.

ಜೆಡಿಎಸ್ ಮುಖಂಡರಾದ ಜಿ.ಟಿ. ದೇವೇಗೌಡ ಅವರು, ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ನಮ್ಮ ಮಿತ್ರಪಕ್ಷ ನಿಜ. ಆದರೆ ಜಿ.ಟಿ. ದೇವೇಗೌಡರ ಹೇಳಿಕೆಯ ಬಗ್ಗೆ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಬೇಕು. ಮುಖ್ಯಮಂತ್ರಿಗಳ ರಾಜೀನಾಮೇ ಕೇಳುವಲ್ಲಿ ಪ್ರತಿಪಕ್ಷವಾಗಿ ಬಿಜೆಪಿಯ ಧೋರಣೆಯಲ್ಲಿ  ಸ್ಪಷ್ಟತೆಯಿದೆ ಎಂದರು.

ಸಿಎಓ ಪ್ರೇರಣೆಯಿಂದಲೇ ಕಾಂಗ್ರೆಸಿಗರು ಬಾಯಿಗೆ ಬಂದAತೆ ಮಾತನಾಡುತ್ತಿದ್ದಾರೆ. ಐವನ್ ಡಿಸೋಜಾ ಅವರಂತು ರಾಜ್ಯಪಾಲರನ್ನು ಬಾಂಗ್ಲಾದೇಶದAತೆ ಓಡಿಸುವ ಮಾತುಗಳನ್ನಾಡುತ್ತಾರೆ. ಕಾಂಗ್ರೆಸಿಗರಿಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನವೇ ಮಾದರಿಗಳಾಗಿವೆ. ಬಿಜೆಪಿಗರಿಗೆ ಸನಾತನ ಭಾರತೀಯ ಸಂಸ್ಕೃತಿ ಮಾದರಿಯಾಗಿದೆ ಎಂದವರು ಹೇಳಿದರು.

ಪುತ್ತೂರು ಮೂಲದ ಬಿಜೆಪಿ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಯಾಗಿದ್ದುö, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 13 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. 6011 ಮತಗಳ ಪೈಕಿ 3500 ಮತಗಳು ನಮ್ಮ ಪಕ್ಷದ್ದೇ ಇವೆ. ಹೀಗಾಗಿ ಕಿಶೋರ್ ಬೊಟ್ಯಾಡಿ ಭರ್ಜರಿ ಬಹುಮತದಿಂದ ಗೆಲ್ಲಲಿದ್ದಾರೆ ಎಂದವರು ನುಡಿದರು.

ವಿದೇಶದಿಂದ ಅಡಕೆ ಆಮದು ಮಾಡುವುದರಿಂದ ನಮ್ಮ ಅಡಕೆ ಮಾರುಕಟ್ಟೆ ಮೇಲಾಗುವ ಪರಿಣಾಮದ ಬಗ್ಗೆ ಕ್ಯಾಂಪ್ಕೋ ಜತೆ ಸೇರಿಕೊಂಡು ಕೇಂದ್ರದ ಸಂಬAಧಪಟ್ಟ ಇಲಾಖೆಗಳ ಜತೆ ಚರ್ಚಿಸಲಾಗುವುದು. ಬೆಳೆಗಾರರಿಗೆ ಸಮಸ್ಯೆಯಾಗದಂತೆ ನಾನು ರೈತ ಜತೆಗಿದ್ದೇನೆ. ಆಮದು ಕಾರಣದಿಂದ ಅಡಕೆ ಧಾರಣೆ ಇಳಿಯಲಿದೆ ಎಂದು ಶಾಸಕ ಅಶೋಕ್ ರೈ ಅವರು ಯಾವ ಮಾನದಂಡದಿAದ ಹೇಳಿದರೋ ಗೊತ್ತಿಲ್ಲö ಎಂದರು.

ಅಡಕೆಯ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಇದುವರೆಗೆ ಶಾಶ್ವತ ಪರಿಹಾರ ಕಂಡುಕೊAಡಿಲ್ಲö ನಿಜ. ಈ ನಿಟ್ಟಿನಲ್ಲಿ  ಜಂಟಿ ಅಧ್ಯಯನ ನಡೆಯಬೇಕಿದೆ. ರಾಜ್ಯ ಸರಕಾರ ಸಂತ್ರಸ್ತ ಅಡಕೆ ಬೆಳೆಗಾರರಿಗೆ ಪರಿಹಾರ ನೀಡುವ ಬಗ್ಗೆ ಯೋಚಿಸಬೇಕು ಎಂದು ಆಗ್ರಹಿಸಿದರು.

ಕಬಕ- ಪುತ್ತೂರು ರೈಲು ನಿಲ್ದಾಣದ ಆವಶ್ಯಕತೆಗಳ ಬಗ್ಗೆ ವರದಿ ತರಿಸಿಕೊಂಡು ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ ಅವರು, ಕೊಂಕಣ ರೈಲ್ವೆಯನ್ನು ರೈಲ್ವೆ ಜತೆ ವಿಲೀನಗೊಳಿಸುವ ಚರ್ಚೆ ಆರಂಭಗೊAಡಿದೆ. ಈ ಪ್ರಕ್ರಿಯೆ ಪೂರ್ಣಗೊಂಡರೆ ಅನೇಕ ಸಮಸ್ಯೆಗಳು ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಿರಾಡಿ ಘಾಟಿಯಲ್ಲಿರುವ ರೈಲ್ವೆ ಮಾರ್ಗವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಯಲಿದೆ ಎಂದವರು ನುಡಿದರು.

ಸೆಪ್ಟೆಂಬರ್ 2ರಿಂದ 30ರವರೆಗೆ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಮೊದಲ ಹಂತ ದೇಶದೆಲ್ಲೆಡೆ ಯಶಸ್ವಿಯಾಗಿ ನಡೆದಿದೆ. ಇದೀಗ ಎರಡನೇ ಹಂತ ಆರಂಭಿಸಲಾಗಿದೆ. ಅಟಲ್ ಸದಸ್ಯತ್ವ  ಅಭಿಯಾನ ಎಂಬ ಹೆಸರಿನಲ್ಲಿ ಸಾರ್ವಜನಿಕ ವಲಯವನ್ನು ಸಂಪರ್ಕಿಸಿ ಸಾಮೂಹಿಕವಾಗಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಸದಸ್ಯತ್ವ ಅಭಿಯಾನ ಎಂಬುದು ಪಕ್ಷಕ್ಕೆ ಜೀವ ತುಂಬುವ ಕಾರ್ಯಕ್ರಮ. ಪಕ್ಷವನ್ನು ಮತ್ತೊಮ್ಮೆ ಸರ್ವವ್ಯಾಪಿ, ಸರ್ವಸ್ಪರ್ಷಿಯಾಗಿ ಬೆಳೆಸಲು ಇದು ಸಹಕಾರಿ. ಈ ಅಭಿಯಾನದ ಮೂಲಕ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಲಾಗುತ್ತಿದೆ. ಮೊದಲ ಹಂತದ ಅಭಿಯಾನ ಯಶಸ್ವಿಯಾಗಿದ್ದುö, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೨.೫೦ ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿದೆ. ಸಾಮೂಹಿಕ ಅಭಿಯಾನ ಮುಗಿದಾಗ ಜಿಲ್ಲೆಯಲ್ಲಿ ೩.೫೦ ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಕಾರ್ಯಕರ್ತರು, ನಾಯಕರು ಎಂಬ ಭೇದವಿಲ್ಲದೆ ಎಲ್ಲರೂ  ಈ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಮಾಧ್ಯಮಗೋಷ್ಟಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಕಲ್ಲಿಮಾರ್, ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ  ಉಪಸ್ಥಿತರಿದ್ದರು.

Related Posts

Leave a Reply

Your email address will not be published.