ಆ.26 : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಪರಿಹಾರ ಪ್ರಾಯಶ್ಚಿತ ಕಾರ್ಯಕ್ರಮ

ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆಲ ತಿಂಗಳುಗಳ ಹಿಂದೆ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆದಿತ್ತು. ಆಗ ದೈವಜ್ಞರು ಸೂಚಿಸಿದ ವಿವಿಧ ಪರಿಹಾರ ಕಾರ್ಯಕ್ರಮಗಳು ಆ.26ರ ಬೆಳಗ್ಗೆ ಗಂಟೆ 9 ರಿಂದ ದೇಗುಲದಲ್ಲಿ ನಡೆಯಲಿದೆ. ಬ್ರಹ್ಮಶ್ರೀ ವೇ ಮೂ ರವೀಶ ತಂತ್ರಿ, ಕುಂಟಾರುರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರಗಲಿರುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು ದೈವಜ್ಞರ ನಿರ್ದೇಶನದಂತೆ ಸೀಮೆಯ ಎಲ್ಲಾ ಭಕ್ತಾದಿಗಳು, ವ್ಯವಸ್ಥಾಪನಾ ಸಮಿತಿ, ಅಧಿಕಾರಿ ವರ್ಗ, ಚಾಕರಿಯವರು ಸೇರಿಕೊಂಡು ಈ ಪರಿಹಾರ ಸೇವೆಗಳು ನಡೆಯಲಿದೆ. ಪರಿಹಾರ ಕಾರ್ಯಕ್ರಮದಲ್ಲಿ 12 ತೆಂಗಿನಕಾಯಿ ಗಣಪತಿ ಹವನ, ಶತರುದ್ರಾಭಿಷೇಕ, ಪವಮಾನ ಅಭಿಷೇಕ ಸಹಿತ ಪರಿವಾರ ದೇವರುಗಳಿಗೆ, ದೈವಗಳಿಗೆ ವಿಶೇಷ ಪೂಜೆ ನಡೆಯಲಿದೆ.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸದಸ್ಯರಾದ ಶೇಖರ್ ನಾರಾವಿ, ಐತಪ್ಪ ನಾಯ್ಕ್, ರಾಮದಾಸ್ ಗೌಡ, ರವೀಂದ್ರನಾಥ್ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಪ್ರಧಾನ ಅರ್ಚಕ ವಿ. ಯಸ್. ಭಟ್ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.