ಪುತ್ತೂರು : ವೈದ್ಯರ ಎಡವಟ್ಟಿನಿಂದ ವ್ಯಕ್ತಿ ಸಾವು

ಪುತ್ತೂರು : ವೈದ್ಯರ ಎಡವಟ್ಟಿಗೆ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ರಾತ್ರೋರಾತ್ರಿ ರೋಗಿಯ ಸಂಬಂಧಿಕರು ಮತ್ತು ಸಾರ್ವಜನಿಕರು ಆಸ್ಪತ್ರೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ ಎಂಬವರು ಜ್ವರದ ಕಾರಣ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಪರೀಕ್ಷಿಸಿದ ವೈದ್ಯರು ನಾಲಿಗೆಯ ಕೆಳ ಭಾಗದಲ್ಲಿ ಗೆಡ್ಡೆಯ ಬಗ್ಗೆ ಸೂಚನೆ ನೀಡಿದ್ದರು. ಬಳಿಕ ಗೆಡ್ಡೆಯನ್ನ ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಬೇಕೆಂದು ವೈದ್ಯರು ಕೃಷ್ಣಪ್ಪ ಮನೆಯವರಿಗೆ ಸೂಚಿಸಿದ್ದರು. ಶಸ್ತ್ರಚಿಕಿತ್ಸೆ ಮಾಡಲು ಮೃತರ ಹೆಂಡತಿ ಸರೋಜಿನಿ ಮತ್ತು ಅತ್ತಿಗೆಯ ಮೂಲಕ ಸಹಿ ಹಾಕಿಸಿಕೊಂಡ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಕೃಷ್ಣಪ್ಪ ಗೌಡರು ಸಾವನ್ನಪ್ಪಿದ್ದಾರೆ. ಇದರ ವಿರುದ್ಧ ರೊಚ್ಚಿಗೆದ್ದ ಸಂಬಂಧಿಕರು ಮತ್ತು ಸಾರ್ವಜನಿಕರು ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ವೈದ್ಯರ ಎಡವಟ್ಟಿನಿಂದಲೇ ವ್ಯಕ್ತಿ ಮೃತಪಟ್ಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published.