ಪುತ್ತೂರು: ನಿರೂಪಕರಾದ ಬಾಲಕೃಷ್ಣ ರೈ ಪೊರ್ದಾಲ್ ರವರಿಗೆ ಪುತ್ತೂರು ತಾಲೂಕು ಯುವ ಪ್ರಶಸ್ತಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಕೊಡಮಾಡುವ ಪುತ್ತೂರು ತಾಲೂಕು ಯುವ ಪ್ರಶಸ್ತಿಗೆ ಖ್ಯಾತ ನಿರೂಪಕರಾದ ಬಾಲಕೃಷ್ಣ ರೈ ಪೊರ್ದಾಲ್ ಆಯ್ಕೆಯಾಗಿದ್ದಾರೆ.

ಪುತ್ತೂರು
ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಇವರು ಬಹುಮುಖ ಪ್ರತಿಭಾವಂತ ಯುವ ಸಾಧಕರು.ರಂಗ ಕಲಾವಿದನಾಗಿ,ಸುಮಾರು 250ಕ್ಕಿಂತಲೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವರು.
ರಂಗ ಕಲಾವಿದ, ನಾಟಕ ಕಲಾವಿದ ಮತ್ತು ನಿರ್ದೇಶಕರಾಗಿರುವ ಬಾಲಕೃಷ್ಣ ರೈ ಪೊರ್ದಾಲ್ ಉತ್ತಮವಾಗ್ಮಿ, ಸಂಪನ್ಮೂಲ ವ್ಯಕ್ತಿ, ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಕೆಸರುಗದ್ದೆ ಕ್ರೀಡಾಕೂಟದ ವೀಕ್ಷಕ ವಿವರಣೆಕಾರರಾಗಿ ಹಲವು ಕಡೆ ಕ್ರೀಡಾಮನ್ನಣೆಗೆ ಪಾತ್ರರಾಗಿರುವರು.ಪುತ್ತೂರು ತಾಲೂಕಿನ ಸರಕಾರಿ ಕಾರ್ಯಕ್ರಮದ ನಿರೂಪಕರಾಗಿ, ಉತ್ತಮ ಸಂಘಟಕ, ಉತ್ತಮ ಬರಹಗಾರ, ಉತ್ತಮ ಕ್ರೀಡಾಪಟು,ಕಬಡ್ಡಿ ರಾಷ್ಟ ಮಟ್ಟದ ತರಬೇತುದಾರರಾಗಿ, ದುಶ್ಚಟ ಮುಕ್ತ ಸಮಾಜ ಕಾರ್ಯಕ್ರಮದ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಉತ್ತಮ ಒಬ್ಬ ಸ್ಕೌಟ್ ಶಿಕ್ಷಕನಾಗಿ ಜನಾನುರಾಗಿಯಾದವರು.

add - BDG

Related Posts

Leave a Reply

Your email address will not be published.