ಪುತ್ತೂರು : ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆಗೈದ ಸವಿತಾ ಈಶ್ವರಮಂಗಲ

ಪುತ್ತೂರು : ವಿಶ್ವ ಕನ್ನಡ ಸಂಸ್ಥೆ ಇದರ ವತಿಯಿಂದ ವಿಶ್ವ ಕನ್ನಡ 6 ನೇ ರಾಜ್ಯ ಸಮ್ಮೇಳನದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸುವ ಸಾವಿರ ಕವಿಗಳ ಸಮ್ಮೇಳನ ಕವಿಗೋಷ್ಠಿ ಬೆಂಗಳೂರಿನ ಹೆಸರಘಟ್ಟ ಮುಖ್ಯ ರಸ್ತೆ 73 ರಲ್ಲಿರುವ ಅಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಸಮ್ಮೇಳನದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ ಮಾಡುವ ಮೂಲಕ ಯುವ ಸಾಹಿತಿ ಸವಿತಾ ಈಶ್ವರಮಂಗಲ ಇವರ ಹೆಸರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು‌.

ಸವಿತಾ ಈಶ್ವರಮಂಗಲರವರ ಸಾಹಿತ್ಯ ಕ್ಷೇತ್ರ : ಸಾಹಿತ್ಯ ಕ್ಷೇತ್ರದಲ್ಲಿ ಯುವ ಬರಹಗಾರ್ತಿಯಾಗಿ ಬರವಣಿಗೆಯಲ್ಲಿ ತನ್ನದೇ ಹೊಸ ಛಾಪು ಮೂಡಿಸಿ ಮನಸ್ಸಿನ ಭಾವನೆಗಳಿಗೆ ಅಕ್ಷರದ ರೂಪ ಕೊಟ್ಟು ತುಳು ಮತ್ತು ಕನ್ನಡ ಬಾಷೆಯಲ್ಲಿ ಕವನ – ಲೇಖನಗಳನ್ನು ರಚಿಸುತ್ತ ಸಾಕಷ್ಟು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಕವನ ವಾಚನದ ಮೂಲಕ ಬರವಣಿಗೆಯನ್ನು ಇನ್ನಷ್ಟು ಬೆಳೆಸುತ್ತಿದ್ದಾರೆ.
ಯುಗಾದಿ ಕವಿ ಬಳಗ , ಕಾವ್ಯ ಸಂಚಲನ ಬಳಗ , ಇಂಚರ ಸಾಹಿತ್ಯ ಕುಟೀರ ಕೋಲಾರ ಮುಂತಾದ ಹಲವು ಕವಿ ಬಳಗದಲ್ಲಿ 5 ವರ್ಷದಿಂದ ಕವನಗಳನ್ನು ಬರೆಯುತ್ತ ಸದಸ್ಯರಾಗಿದ್ದಾರೆ.
ಇಂಚರ ಸಾಹಿತ್ಯ ಕುಟೀರ ಕೋಲಾರ ಬಳಗದಿಂದ ಇಂಚರ ಸಾಹಿತ್ಯ ರತ್ನ , ಇಂಚರ ಚುಟುಕು ಪ್ರಭೆ , ಇಂಚರ ಚುಟುಕು ಜ್ಞಾನಿ , ಇಂಚರ ಸಾಹಿತ್ಯ ಕಣಜ ಮುಂತಾದ ಪ್ರಶಸ್ತಿ ಪತ್ರಗಳು , ಮನಸ್ಸಿನ ಕಲರವ ಆಯೋಜಿಸಿದ್ದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದಕ್ಕಾಗಿ ಅಭಿನಂದನ ಪತ್ರ , ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕಾಗಿ ಅಭಿನಂದನ ಪತ್ರ , ಮಂಗಳೂರಿನ ಸಮುದ್ರದ ಬೊಕ್ಕಪಟ್ಟಣ ಅಬ್ಬಕ್ಕರಾಣಿ ವಿಹಾರ ನೌಕೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಡಲ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸ್ವರಚಿತ ಕವನ ವಾಚನ ಮಾಡಿದಕ್ಕಾಗಿ ಚಂದನ ಸಾಹಿತ್ಯ ಜಿಲ್ಲಾ ಪ್ರಶಸ್ತಿ , ಕರುಣಾಡ ಹಣತೆ ಕವಿ ಬಳಗ ಚಿತ್ರದುರ್ಗ ಮತ್ತು ಉನ್ನತಿ ಫೌಂಡೇಶನ್ ಧಾರವಾಡ ಇವರ ಸಹಯೋಗದಲ್ಲಿ ಶಿವ ಶರಣ – ಶರಣೆಯರ ಕುರಿತು ಶ್ರೀ ಬಸವಕೇಂದ್ರ ಹೊಸಮಠ ಹಾವೇರಿಯಲ್ಲಿ ಏಕಕಾಲಕ್ಕೆ ಕಾವ್ಯ ರಚನೆ ಮಾಡುವ ಮೂಲಕ ಕನ್ನಡ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ , ವರ್ಲ್ಡ್ ಬುಕ್ ಆಫ್ ರೆಕಾರ್ಡ್ – ಚೇತನ ಫೌಂಡೇಶನ್ ಕರ್ನಾಟಕ -ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಬೆಂಗಳೂರು ಪುಸ್ತಕ ಹಬ್ಬ ಹಾಗೂ ಕಾವ್ಯ ಸಮಾಗಮ ಕಾರ್ಯಕ್ರಮದಲ್ಲಿ ಕಾವ್ಯ ಚೇತನ ಪ್ರಶಸ್ತಿ ಹಾಗೂ 24 ನಿಮಿಷಗಳಲ್ಲಿ ಆಶುಕವಿತೆ ಬರೆಯುವ ಮೂಲಕ ವಿಶ್ವ ದಾಖಲೆ , ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ರಾಜ್ಯ ಸುವರ್ಣ ಮಹೋತ್ಸವದ ಅಂಗವಾಗಿ 2024 ನೇ ಸಾಲಿನ ಸುವರ್ಣ ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಇದರ ಸದಸ್ಯರಾಗಿದ್ದು , ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು
.

add - Rai's spices

Related Posts

Leave a Reply

Your email address will not be published.