ಹಾವು ಕಡಿತಕ್ಕೆ ತುತ್ತಾಗಿದ್ದ ತಾಯಿಗೆ ಮರು ಜನ್ಮ ನೀಡಿದ ಮಗಳು

ತಾಯಿಗೆ ವಿಷದ ಹಾವು ಕಚ್ಚಿದ ಸಂದರ್ಭ ದೃತಿಗೆಡದ ಮಗಳು, ಆ ವಿಷವನ್ನು ಚೀಪಿ ಹೊರ ತೆಗೆದು ಸಿನಿಮೀಯ ರೀತಿಯಲ್ಲಿ ಅಮ್ಮನನ್ನು ರಕ್ಷಿಸಿದ ಘಟನೆ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದಿಂದ ವರದಿಯಾಗಿದೆ. ಈ ಸಾಹಸ ಮೆರೆದ ಯುವತಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ತಾಯಿಗೆ ಮರು ಜನ್ಮ ನೀಡಿದ ಮಗಳು ಎಂದು ಜನರು ಕೊಂಡಾಡುತ್ತಿದ್ದಾರೆ.
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಎಟ್ಯಡ್ಕ ಎಂಬಲ್ಲಿ ವಾರದ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಎಟ್ಯಡ್ಕ ನಿವಾಸಿ ಸತೀಶ್ ರೈ ಎಂಬವರ ಪತ್ನಿ ಮಮತಾ ಎಸ್. ರೈ ಅವರಿಗೆ ಮನೆಯ ತೋಟದಲ್ಲಿ ನಾಗರಹಾವು ಕಚ್ಚಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಮಗಳು ಶ್ರಮ್ಯ ರೈ ಕೂಡಲೇ ಹಾವು ಕಚ್ಚಿದ ಜಾಗಕ್ಕೆ ಬಾಯಿಯಿಟ್ಟು ವಿಷ ಪೂರಿತ ರಕ್ತವನ್ನು ಚೀಪಿ ಹೊರ ತೆಗೆದು ವಿಷಪ್ರಸರಣ ಆಗದಂತೆ ನೋಡಿಕೊಂಡು, ತಾಯಿಯ ಜೀವಕ್ಕೆ ಆಗಬಹುದಾಗಿದ್ದ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.

Related Posts

Leave a Reply

Your email address will not be published.