ಪುತ್ತೂರು: ವಿಟಿಯು ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾವಳಿ- ಎಸ್.ಜೆ.ಇ.ಸಿ ತಂಡ ವಿನ್ನರ್ಸ್
ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪುರುಷರ ವಾಲಿಬಾಲ್ ತಂಡವು 28 ಮತ್ತು 29 ನವೆಂಬರ್ 2024ರಂದು ವಿವಿಸಿಇ ಪುತ್ತೂರಿನಲ್ಲಿ ನಡೆದ ವಿಟಿಯು ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿನ್ನರ್ಸ್ ಟ್ರೋಫಿಯನ್ನು ಪಡೆದುಕೊಂಡಿತು.
ದೈಹಿಕ ಶಿಕ್ಷಣ ನಿರ್ದೇಶಕರಾದ ವನೀಷಾ ರೋಡ್ರಿಗಸ್ ಮತ್ತು ಎಸ್.ಜೆ.ಇ.ಸಿ ವಾಲಿಬಾಲ್ ತರಬೇತುದಾರ ಜಯವರ್ದನ್ ಮತ್ತು ಗುರುನಂದನ್ ಅವರ ಮಾರ್ಗದರ್ಶನದಲ್ಲಿ ಟ್ರೋಫಿಯನ್ನು ಪಡೆದುಕೊಂಡಿತು. ಅಗಾಧ ಸಾಧನೆಗಾಗಿ ಇಡೀ ತಂಡವನ್ನು, ತರಬೇತುದಾರರನ್ನು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಎಸ್.ಜೆ.ಇ.ಸಿಯ ಆಡಳಿತ ಮಂಡಳಿಯು ಅಭಿನಂದಿಸುತ್ತದೆ.