ಪುತ್ತೂರು : ಕಾಮಧೇನು ಗೋ ಶಾಲೆ ಪ್ರಾರಂಭೋತ್ಸವ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಮಧೇನು ಗೋ ಶಾಲೆ ಪ್ರಾರಂಭೋತ್ಸವ ಮತ್ತು ಗೋ ಪೂಜೆ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ ಸಂಜೆ ಗೋ ಪೂಜೆ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ಗೋ ಪೂಜೆ ನಡೆಯಿತು. ಗೋವುಗಳನ್ನು ಶೃಂಗರಿಸಿ. ಗಂಧ ಪ್ರಸಾದವನ್ನು ಹಚ್ಚಿ, ಅದಕ್ಕೆ ದೋಸೆ, ಅವಲಕ್ಕಿ, ಬಾಳೆ ಹಣ್ಣುಗಳನ್ನು ನೀಡಲಾಯಿತು. ಗೋ ಪೂಜೆ ಸಭಾ ಕಾರ್ಯಕ್ರಮದಲ್ಲಿ ಗೋ ಸಮರ್ಪಣೆ ಮಾಡಿದ ದಾನಿಗಳಿಗೆ, ಗೋ ಗ್ರಾಸ ನೀಡಿದವರನ್ನು ಸನ್ಮಾನಿಸಲಾಯಿತು. ಗೋ ಶಾಲೆಯ ನಿರ್ಮಾಣದ ಮುಂದಾಳತ್ವ ವಹಿಸಿಕೊಂಡವರಿಗೆ ಮತ್ತು ಗೋವಿನ ನಿತ್ಯ ಆರೈಕೆ ಮಾಡುತ್ತಿರುವವರನ್ನು ಗೌರವಿಸಲಾಯಿತು.
ಗೋವು ಪೂಜೆಯಲ್ಲಿ ಪಾಲ್ಗೊಂಡ ಶಾಸಕ ಸಂಜೀವ ಮಠಂದೂರು ಗ್ರೋ ಗ್ರಾಸ ಧನಸಹಾಯ ದೇಣಿಗೆ ಸಮರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಗೋವು ಮತ್ತು ನಾವು ನಮ್ಮ ಸಂಸ್ಕೃತಿ, ಹಳ್ಳಿಯ ಕೃಷಿಕನಿಗೆ ಗೋವು ಇಲ್ಲದೆ ಬದುಕಿಲ್ಲ. ನಮ್ಮ ದೇಶ ಕೃಷಿ ಸಂಪತ್ತು ಭರಿತ ದೇಶವಾಗಬೇಕಾದರೆ ಗೋವಿನ ಪಾತ್ರ ಮಹತ್ವ. ಹಾಗಾಗಿ ವರ್ಷಕ್ಕೊಮ್ಮೆ ನಾವು ಗೋ ಪೂಜೆಯ ದಿನ ಗೋವನ್ನು ಸ್ಮರಿಸುತ್ತೇವೆ ಎಂದರು.
ಗೋ ಶಾಲೆಗೆ ಸ್ವದೇಶಿ ತಳಿಯನ್ನು ಸಮರ್ಪಣೆ ಮಾಡಿದ ದಾನಿಗಳನ್ನು ಮತ್ತು ಗೋ ಗ್ರಾಸ ನೀಡಿದವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗೋ ಶಾಲೆ ನಿರ್ಮಾಣದ ಜವಾಬ್ದಾರಿ ವಹಿಸಿದವರನ್ನು ಮತ್ತು ಸಹಕಾರ ನೀಡಿದವರನ್ನು ಮತ್ತು ಗೋವಿನ ನಿತ್ಯ ಆರೈಕೆ ಮಾಡುತ್ತಿರುವ ದೇವಳದ ನಿತ್ಯ ಚಾಕ್ರಿಯವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಗೋವಿನ ಆರೋಗ್ಯ ಚಿಕಿತ್ಸಕರಾದ ಡಾ. ಪ್ರಸನ್ನ ಹೆಬ್ಬಾರ್ ಅವರನ್ನು ದೇವಳದ ಬಸವನ ಸೇವೆ ಮಾಡುತ್ತಿರುವ ವಿಭಾಗದಿಂದ ಸನ್ಮಾನಿಸಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ಶೇಖರ್ ನಾರಾವಿ, ಡಾ. ಸುಧಾ ಎಸ್ ರಾವ್, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು ಮತ್ತಿತರರು ಉಪಸ್ಥಿತರಿದ್ದರು.