PWD ಜೂನಿಯರ್ ಇಂಜಿನಿಯರ್ ಮೇಲೆ ಅಕ್ರಮ ಆಸ್ತಿ ಆರೋಪ : ಆರೋಪಿ ಖುಲಾಸೆ

ತನ್ನ ಸೇವಾ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆದಾಯ ಗಳಿಸಿದ್ದಾರೆ ಎಂದು ಆರೋಪಿಸಿ PWD ಇಂಜಿನಿಯರ್ ಅರುಣ್ ಪ್ರಕಾಶ್ ವಿರುದ್ದ ಪೊಲೀಸ್ ಉಪಾಧಿಕ್ಷಕರು ಕರ್ನಾಟಕ ಲೋಕಾಯುಕ್ತ ಇವರು ಮಾನ್ಯ ಮಂಗಳೂರು ಲೋಕಾಯುಕ್ತ ನ್ಯಾಯಾಲಯ ಇಲ್ಲಿ ದೋಷರೋಪಣಾ ಪತ್ರ ಸಲ್ಲಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯವು ದೋಷಮುಕ್ತ ಗೊಳಿಸಿದೆ. ಬಂಟ್ವಾಳದಲ್ಲಿ ಸಹಾಯಕ ಜೂನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಪ್ರಕಾಶ್ ಡಿಸೋಜ ಇವರು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ದಿನಾಂಕ 19-12-2014 ರಂದು ಮಂಗಳೂರು ಲೋಕಾಯುಕ್ತ ಅಧಿಕ್ಷಕರ ನಿರ್ದೇಶನದಂತೆ ಬಂಟ್ವಾಲದಲ್ಲಿದ್ದ ಅವರ ಮನೆಗೆ ಬೆಳಿಗ್ಗೆ ಮುಂಜಾವಿನ ಸಮಯ ದಾಳಿ ನಡೆಸಿದ್ದರು. ದಾಳಿಯ ಸಮಯ ಮನೆಯಲ್ಲಿ ದಾಖಲೆಗಳು , ಬಂಗಾರದ ಒಡವೆಗಳು , ಮತ್ತು ನಗದು ಹಣ ದೊರೆತಿದ್ದು, ಅದೇ ಸಮಯಕ್ಕೆ ಅವರು ಖಾತೆ ಹೊಂದಿದ್ದ ಬ್ಯಾಂಕ್ ಗಳಿಗೆ ದಾಳಿ ಮಾಡಿದಾಗ ಅಲ್ಲಿ ಲಾಕರ್ ನಲ್ಲಿ ಇಟ್ಟಿದ್ದ ಒಡವೆ ಗಳು ಮತ್ತು ಠೇವಣಿಗಳು ದೊರೆತ್ತಿದ್ದು, ಅವುಗಳನ್ನೆಲ್ಲಾ ವಶಪಡಿಸಿಕೊಂಡು ತನಿಖೆ ಮುಂದು ವರಿಸಿದ್ದರು.

ತನಿಖೆಯ ಸಮಯ
ಅರುಣ್ ಪ್ರಕಾಶ್ ರವರು ದಿನಾಂಕ 19-05-1992 ರಿಂದ ದಾಳಿಯ ದಿನಾಂಕದ ವರೆಗಿನ ಅವಧಿಯಲ್ಲಿ ಸರಕಾರಿ ಅಧಿಕಾರಿಯಾಗಿ ಅಧಿಕಾರಿಯಾಗಿ ಗಳಿಸಿರುವ ಒಟ್ಟು ಆಸ್ತಿ ಗಳು ಮತ್ತು ಖರ್ಚುಗಳನ್ನು ಕಳೆದು ಲೆಕ್ಕ ಹಾಕಿದಾಗ ಅರುಣ್ ಪ್ರಕಾಶರವರು 69,48,298.98(ರೂಪಾಯಿ ಅರವತ್ತ ಒಂಬತ್ತು ಲಕ್ಷ ನಲವತ್ತ ಎಂಟು ಸಾವಿರ ಇನ್ನೊರ ತೊಂಬತ್ತ ಎಂಟು ರೂಪಾಯಿ ತೊಂಬತ್ತ ನಾಲ್ಕು ಪೈಸೆ ) ಆಪಾದಿತರ ವಶದಿಂದ ಪಡೆದಿದ್ದ ಬಂಗಾರದ ಒಡವೆಗಳಲ್ಲಿ ಅವರ ಪತ್ನಿಯ ಒಡವೆಗಳನ್ನು ಕಳೆದು 1456 ತೂಕದ ಆಭರಣ ದ ಬೆಲೆ 30,54,205(ಮೂವತ್ತು ಲಕ್ಷದ ಐವತ್ತ ನಾಲ್ಕು ಸಾವಿರ ಇನ್ನೊರ ಐದು ರೂಪಾಯಿ ) 5309000/-(ಐವತ್ತ ಮೂರು ಲಕ್ಷದ ಒಂಬತ್ತು ಸಾವಿರ )ಮೌಲ್ಯದ ಸ್ಟಿರಾಸ್ತಿ ಹಾಗೂ ವಿವಿಧ ಬ್ಯಾಂಕ್ ಗಳಲ್ಲಿ ಲಕ್ಷಾಂತರ ಹಣ ಠೇವಣಿ ಇರಿಸಿದ್ದಾರೆ ಎಂದೂ ಅವರ ಸಂಪಾದನೆಯ ಖರ್ಚುಗಳನ್ನು ಲೆಕ್ಕಾಚಾರ ಹಾಕಿದಾಗ ಮೇಲಿನಂತೆ ಆದಾಯಕ್ಕಿಂತ ಹೆಚ್ಚಿನ ಅಂದರೆ 71.58% ರಷ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎಂದೂ, ದಾಖಲೆ ಮತ್ತು ಸಾಕ್ಷಾಧಾರ ಗಳಿಂದ ದೃಢ ಪಡುತ್ತದೆ ಎಂದೂ ಆರೋಪಿಸಿ ಆರೋಪಿತನ ವಿರುದ್ಧ ಕಲಂ 13(1)(ಇ )ಜೊತೆಗೆ 13(2) ಲಂಚ ವಿರೋಧಿ ಕಾಯ್ದೆ 1988 ರಂತೆ ಶಿಕ್ಷರ್ಹ ಅಪರಾಧ ಎಸಗಿದ್ದಕ್ಕೆ ಶಿಕ್ಷೆಯನ್ನು ನೀಡಬೇಕೆಂದು ಕೋರಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ವಿಚಾರಣಾ ಕಾಲದಲ್ಲಿ ಆರೋಪಿಯ ಪರ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ ಯವರು ವಾದಿಸಿದ್ದು, ಸಾಕ್ಷಿಗಳನ್ನು ಅಡ್ಡ ವಿಚಾರಣೆ ಮಾಡಿ ಲೋಕಾಯುಕ್ತ ಪೊಲೀಸರು ತನಿಖಾ ಸಮಯ ಯಾವುದೇ ವೈಜ್ಞಾನಿಕ ವಿಧಾನವನ್ನು ಅನುಸರಿಸದೆ ಸುಳ್ಳು ಆರೋಪ ಪಟ್ಟಿಯನ್ನು ದಾಖಳಿಸಿದ್ದಾರೆ ಎಂದು ವಾದಿಸಿದ್ದರು. ಆಭರಣಗಳಿಗೆ ಸಂಬಂಧಿಸಿದಂತೆ ಆಯಾ ಕಾಲ ಘಟ್ಟದಲ್ಲಿ ಚಾಲ್ತಿಯಲ್ಲಿದ್ದ ಮೌಲ್ಯವನ್ನು ಪರಿಗಣಿಸುವ ಬದಲು ರೈಡ್ ಮಾಡಿದ್ದ ದಿನಾಂಕದ ಮೌಲ್ಯವನ್ನು ಪರಿಗಣಿಸಿದ್ದಾರೆ, ಆರೋಪಿಯ ಪತ್ನಿ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದು ಅವರಿಗೆ ಹಿರಿಯರಿಂದ ಬಳುವಳಿಯಾಗಿ ಆಸ್ತಿಗಳು ಬಂಗಾರದ ಒಡವೆಗಳು ಬಂದಿದ್ದು ಅವುಗಳಲ್ಲಿ ಕೆಲವು ಆಸ್ತಿಗಳನ್ನು ಮಾರಾಟ ಮಾಡಿ ಹಣ ಗಳಿಸಿದ್ದಾರೆ. ಇವೆಲ್ಲವನ್ನೂ ಆರೋಪಿಯ ಖಾತೆಗೆ ಪರಿಗಣಿಸಿ ಸುಳ್ಳು ಆರೋಪ ಮಾಡಲಾಗಿದೆ. ಆರೋಪಿ ಯಾವುದೇ ಆಸ್ತಿ ಸಂಪಾದನೆ ಮಾಡಿದ್ದ ಬಗ್ಗೆ ದಾಖಲೆಗಳು ಇಲ್ಲ. ತನ್ನ ಸೇವಾ ಅವಧಿಯಲ್ಲಿ ಯಾವುದೇ ಬಂಗಾರದ ಒಡವೆಗಳನ್ನು ಖರೀದಿಸಿಲ್ಲ. ವಶಪಡಿಸಿ ಕೊಂಡಿರುವ ಬಂಗಾರ ಗಳಲ್ಲಿ ಸ್ವಲ್ಪ ಅಂಶ ತನ್ನ ತಾಯಿಗೆ ಸಂಬಂದಿಸಿದ್ದು ಅವರು 2008 ರಲ್ಲಿ ಮೃತ ಪಟ್ಟಿದ್ದು ಆ ಬಳಿಕ ನನ್ನ ಇಬ್ಬರು ಸಹೋದರ ಮತ್ತು ಒಬ್ಬ ಸಹೋದರಿಯೊಂದಿಗೆ ಜಂಟಿ ಹಕ್ಕನ್ನು ಹೊಂದಿದ್ದೇವೆ. ಉಳಿದ ಎಲ್ಲಾ ಬಂಗಾರ ಮತ್ತು ಠೇವಣಿ ಪತ್ನಿಗೆ ಸಂಬಂಬಿಡಿಸಿದ್ದಾಗಿದೆ ಎಂದೂ, ಲೋಕಾಯುಕ್ತ ಪೊಲೀಸರು ಆರೋಪಿ ಮತ್ತು ಆತನ ಪತ್ನಿಯ ಆದಾಯಗಳನ್ನು ಬೇರೆ ಬೇರೆಯಾಗಿ ಪರಿಗಣಿಸದೆ ಆರೋಪಿಯ ಖಾತೆಗೆ ಸೇರಿಸಿದ್ದಾರೆ. ಇದು ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ತನಿಖೆ. ಆಪಾಧಿತರು ತನ್ನ ಸೇವಾ ಅವಧಿಯಲ್ಲಿ ಯಾವುದೇ ಅಕ್ರಮ ಎಸಾಗದಿದ್ದರೂ ಅವರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ವಾದಿಸಿದ್ದರು. ಆರೋಪಿ ಪರ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ ಇವರ ವಾದವನ್ನು ಪುರಾಸ್ಕರಿಸಿದ ನ್ಯಾಯಾಲಯವು ದಿನಾಂಕ 10/02/2023 ರಂದು ಅಂತಿಮ ತೀರ್ಮಾನ ವನ್ನು ಪ್ರಕಟಿಸಿಆರೋಪಿಯನ್ನು ದೋಷಮುಕ್ತ ಗೂಳಿಸಿದೆ.

ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ :
ಆರೋಪಿಯನ್ನು ದೋಷಮುಕ್ತ ಗೊಳಿಸುತ್ತಾ ನ್ಯಾಯಾಲಯವು ಆರೋಪಿಯಿಂದ ವಶಪಡಿಸಿ ಕೊಂಡಿರುವ ಎಲ್ಲಾ ಬಂಗಾರದ ಒಡವೆಗಳನ್ನು, ಆಸ್ತಿಯ ದಾಖಲೆಗಳನ್ನು, ಇತರೇ ಬ್ಯಾಂಕ್ವಾ ಠೇವಣಿ ಸಂಬಂಧಿ ದಾಖಲೆಗಳನ್ನು ವಾಪಾಸ್ ನೀಡಬೇಕೆಂದೂ ಆದೇಶ ನೀಡಿದೆ. ಆರು ತಿಂಗಳ ಬಳಿಕ ಈ ದಾಖಲೆ ಮತ್ತು ಒಡವೆಗಳನ್ನು ವಾಪಾಸ್ ನೀಡಬೇಕು ಎಂದು ತನ್ನ ಆದೇಶದಲ್ಲಿ ಸ್ಪಷ್ಟ ಪಡಿಸಿದೆ

Related Posts

Leave a Reply

Your email address will not be published.