ಬೆಳಪು ಅಂಬೇಡ್ಕರ್ ಭವನದ ಬಳಿ ಹೆಬ್ಬಾವು ಪ್ರತ್ಯಕ್ಷ

ಬೆಳಪು ಅಂಬೇಡ್ಕರ್ ಭವನದ ಬಳಿ ಸ್ಥಳೀಯರಲ್ಲಿ ಭಯ ಹುಟ್ಟಿಸಿದ ಬೃಹತ್ ಹೆಬ್ಬಾವನ್ನೂ ಶಿವಾನಂದ ಪೂಜಾರಿ ಹಾಗೂ ಪ್ರಶಾಂತ್ ಪೂಜಾರಿ ನೇತೃತ್ವದ ತಂಡ ಸೆರೆ ಹಿಡಿದು, ರಕ್ಷಿಸಿದ್ದಾರೆ.ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಬಳಿಕ ಅರಣ್ಯ ಇಲಾಖೆಯ ಸಿಬಂದಿಗಳ ಸುಪರ್ದಿಗೆ ಒಪ್ಪಿಸಲಾಗಿದೆ.