ಮಳೆಯ ಅವಾಂತರ: ಪೆರುವಾಜೆಯ ಮುಂಡಾಜೆ ಎಂಬಲ್ಲಿ ಗುಡ್ಡ ಕುಸಿತ: 20ಕ್ಕೂ ಅಧಿಕ ಮನೆಗಳ ಸಂಪರ್ಕ ಕಡಿತ

ಭಾರೀ ಮಳೆಯ ಪರಿಣಾಮದಿಂದ ಪೆರುವಾಜೆಯ ಮುಂಡಾಜೆ ಎಂಬಲ್ಲಿ ಗುಡ್ಡ ಕುಸಿತಗೊಂಡು ೨೦ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ.

ಧಾರಾಕರಾವಾಗಿ ಸುರಿದ ಮಳೆಯಿಂದಾಗಿ ಸುಮಾರು100 ಮೀಟರ್ ದೂರದಷ್ಟು ಗುಡ್ಡ ಕುಸಿದು ಗ್ರಾಮ ಪಂಚಾಯತ್ ರಸ್ತೆಯ ಮೇಲೆ ಬಿದ್ದು 15 ಪ.ಜಾ ಕುಟುಂಬಗಳಿಗೆ ಮತ್ತು 5 ಇತರೆ ಮನೆಗಳಿಗೆ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಸುಳ್ಯ ತಾಲೂಕಿನ ತಹಶೀಲ್ದಾರಾದ ಮಂಜುಳಾ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಅವಿನ್ ರಂಗತಮಲೆ, ಪೆರುವಾಜೆ ಗ್ರಾಮ ಲೆಕ್ಕಾಧಿಕಾರಿ ಅಜಯ್ ಮತ್ತು ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ ಹಾಗೂ ಗ್ರಾಮ ಪಂಚಾಯಿತಿನ ಮತ್ತು ಸದಸ್ಯರು ಜೊತೆಗಿದ್ದರು.