ಶತ ದಿನೋತ್ಸವದ ಸಂಭ್ರಮದಲ್ಲಿ ರಾಜ್ ಸೌಂಡ್ಸ್ ಮತ್ತು ಲೈಟ್ಸ್
ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ ಇದರ ವತಿಯಿಂದ “ರಾಜ್ ಸೌಂಡ್ಸ್ ಮತ್ತು ಲ್ಯೆಟ್ಸ್” ತುಳು ಚಲನಚಿತ್ರದ ಶತದಿನೋತ್ಸವದ ಸಂಭ್ರಮ ವನ್ನು ಪಡುಬಿದ್ರಿ ಭಾರತ್ ಮಾಲ್ ಮುಂಭಾಗದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಪಡುಬಿದ್ರಿ ಪೇಟೆಯಿಂದ ಭಾರತ್ ಮಾಲ್ ವರಗೆ ಕಾಲ್ನಡಿಗೆ ಜಾಥ ನಡೆಯಿತು..ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದರು.. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿಮಲ ಕೆ ಸಾಲ್ಯಾನ್, ಚಿತ್ರದ ನಾಯಕ ನಟ ವಿನೀತ್ ಕುಮಾರ್ , ನಿರ್ದೇಶಕ ರಾಹುಲ್ ಅಮೀನ್, ನಿರ್ಮಾಪಕ ಅನಂದ್ ಕುಂಪಲ, ನಟರಾದ ಸಂದೀಪ್ ಮಾನಿಬೆಟ್ಟು , ಮರ್ವಿನ್ ಶಿರ್ವ ಮತ್ತಿತ್ತರು ಉಪಸ್ಥಿತರಿದ್ದರು.. ಸಂತೋಷ್ ಪಡುಬಿದ್ರಿ ಸ್ವಾಗತಿಸಿ ನಿರೂಪಿಸಿದರು…