ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಗೆ ಉದ್ಯಮಿ ರಮೇಶ್ ದೇವಾಡಿಗ ಭೇಟಿ, ಮಕ್ಕಳೊಂದಿಗೆ ಚರ್ಚೆ
ಅಂಪಾರು- ಮೂಡುಬಗೆಯಲ್ಲಿರುವ ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಗೆಉದ್ಯಮಿ ರಮೇಶ್ ದೇವಾಡಿಗ ವಂಡ್ಸೆ ಹಾಗೂ ತಲ್ಲೂರು ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ರವಿ ತಲ್ಲೂರು ಇವರು ಭೇಟಿ ನೀಡಿ ವಿಶೇಷ ಮಕ್ಕಳೊಂದಿಗೆ ಚರ್ಚಿಸಿದರು. ಮಕ್ಕಳು ತಮ್ಮದೇ ಆದ ಭಾಷೆಯಲ್ಲಿ ಪರಿಚಯ ಮಾಡಿಕೊಂಡರು.
ಮಕ್ಕಳಿಗೆ ಅಗತ್ಯ ಇರುವ ಪಠ್ಯಪುಸ್ತಕವನ್ನು ಹಾಗೂ ಅಡುಗೆ ಮನೆಗೆ ಗ್ರೈಂಡರ್ ಕೊಡುವೆಯಾಗಿ ನೀಡಿದರು.ವಿಶೇಷ ಮಕ್ಕಳ ಸೇವೆಯಲ್ಲಿ ಜೀವನದ ಸಾರ್ಥಕತೆ ಇದೆ ಎಂದು ರಮೇಶ್ ದೇವಾಡಿಗ ಹೇಳಿದರು.ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರವೀಂದ್ರ ದೇವಾಡಿಗ, ಗಿರೀಶ್ ಮೊಗವೀರ ಉಪ್ಪಿನಕುದ್ರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.