ಉಡುಪಿಯಲ್ಲಿ ನಿರಂತರವಾಗಿ ಭಾರೀ ಮಳೆ,ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ

ಉಡುಪಿಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು,ಉಡುಪಿ ಜಿಲ್ಲೆಯ ಕೆಮ್ತೂರು ,ಬೊಳ್ಜೆ ಭಾಗ ಸಂಪೂರ್ಣ ಜಲಾವೃತಗೊಂಡಿದೆ. ಪಾಪನಾಶಿನಿ ನದಿ ತುಂಬಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಮನೆಗಳು ಜಾಲಾವೃತಗೊಂಡಿದ್ದು, ಅಗ್ನಿ ಶಾಮಕ ದಳ ಸಿಬಂದಿಗಳು ರಬ್ಬರ್ ಮೂಲಕ ನೆರೆ ಸಂತ್ರಸ್ತರನ್ನ ರಕ್ಚಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆ ತಂದರೂ. ಮಳೆ ಪ್ರಮಾಣ ಜಾಸ್ತಿಯಾಗುತ್ತಿದ್ದು, ನದಿ ನೀರಿ ಮಟ್ಟ ಹೆಚ್ಚಾಗುತ್ತಿರುವುದು ಸ್ಥಳೀಯರ ಅತಂಕಕ್ಕೆ ಕಾರಣವಾಗಿದೆ.
