ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ ಪಕ್ಷದ ಪಧಾಧಿಕಾರಿಗಳ ಆಯ್ಕೆ

ಉಡುಪಿ: ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ಕರ್ನಾಟಕ ಪಕ್ಷದ ಉಡುಪಿ ಜಿಲ್ಲಾ ಮಟ್ಟದ ಪಧಾಧಿಕಾರಿಗಳ ಅಯ್ಕೆಯು ಬ್ರಹ್ಮಾವರದ ಧರ್ಮವರ ಸಭಾಂಗಣದಲ್ಲಿ ನಡೆಯಿತು.ಪಕ್ಷದ ರಾಜ್ಯಧ್ಯಕ್ಷರಾಗಿರುವ ಡಾ.ಅರ್ ಮೋಹನ್ ರಾಜ್ ನೇತೃತ್ವದಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ಬಳಿಕ ನಡೆದ ಅಯ್ಕೆ ಪ್ರಕ್ರಿಯೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅರ್ ಟಿ ಐ ಸಂಘಟನೆಗಳಲ್ಲಿ ಸಕ್ರಿಯಾಗಿರುವ ಸದಶಿವ ಶೆಟ್ಟಿ ಹೇರೂರು ಇವ ರನ್ನು ಉಡುಪಿ ಜಿಲ್ಲಾದ್ಯಕ್ಷರನ್ನಾಗಿ ಅಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಅಕ್ಬರ್ ಪಾಶ, ಸದಶಿವ ಕುಂದಾಪುರ ,ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ನಾಯ್ಕ.ಸಂಘಟನಾ ಕಾರ್ಯದರ್ಶಿಗಳಾಗಿ ಅಶಾ ಕುಕ್ಕೆಹಳ್ಳಿ ಮಹೇಶ್ ಉಡುಪ, ಉದಯ್ ದೇವಾಡಿಗ ,ಜಂಟಿ ಕಾರ್ಯದರ್ಶಿಯಾಗಿ ಸುರೇಂದ್ರ ಕುಕ್ಕೆಹಳ್ಳಿ, ಜಿಲ್ಲಾ ಸಮಿತಿ ಸದಸ್ಯರುಗಳಾಗಿ ರಮೇಶ್ ಮಾಬಿಯಾನ,ಸುಜಾತ ಹಾವಂಜೆ,ಸುರೇಖ ಸಂಜೀವ , ಗೋಪಾಲ ಶಿವಪುರ , ಜಿಲ್ಲಾ ಖಾಂಜಂಜಿ ವಿಠಲ ಹಾವಂಜೆ ಸಾಮಾಜಿಕ ಜಾಲತಾಣ ನಿರ್ವಹಣೆಯ ಜಾವಬ್ದಾರಿಯನ್ನು ಶರತ್ ಹಾವಂಜೆ ಯವರಿಗೆ ನೀಡಲಾಯಿತು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಯ್ಕೆಯಾದ ಸದಶಿವ ಶೆಟ್ಟಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಸಮಾಜಮುಖಿ ಹೋರಾಟದ ಜೊತೆಯಲ್ಲಿ ಅರ್ ಪಿ ಐ ಪಕ್ಷವನ್ನು ಕೂಡ ಜನ ಸಮಾನ್ಯರ ಮನೆ ಬಾಗಿಲಿಗೆ ಕೊಂಡೊಯ್ಯೊವುದರ ಜೊತೆಗೆ , ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜಿಲ್ಲೆಯಲ್ಲಿ ಬಲಿಷ್ಟ ಪಕ್ಷವನ್ನಾಗಿ ಹೊರ ಹೊಮ್ಮಿಸುವುದಾಗಿ ಹೇಳಿದರು.
ಸಭೆಯಲ್ಲಿ ಅರ್ ಪಿ ಐ ಕೆ ಪಕ್ಷದ ರಾಜ್ಯಾಧ್ಯಕ್ಷ ಡಾ ಅರ್ ಮೋಹನ್ ರಾಜ್,ರಾಜ್ಯ ಉಪಾಧ್ಯಕ್ಷರಾದ ರಾಜು ಎಂ ತಳವಾರ, ಶೇಖರ್ ಹಾವಂಜೆ ,ಸ್ವಪ್ನ ಮೋಹನ್, ಡಾ ಜಿ ಶಿವಕುಮಾರ್ , ರಾಜ್ಯ ಸಮಿತಿ ಸದಸ್ಯರಾದ ಶರಣು ಧೋರಣಾ ಹಳ್ಳಿ
ಉಪಸ್ಥಿತರಿದ್ದರು.