ರೋಹನ್ ಕಾರ್ಪೋರೇಷನ್‍ಗೆ ಟೈಮ್ಸ್ ಆಫ್ ಇಂಡಿಯಾ : 2023ನೇ ವರ್ಷದ ಉದಯೋನ್ಮುಖ ಯೋಜನೆ ಪ್ರಶಸ್ತಿ

ಮಂಗಳೂರಿನ ರೋಹನ್ ಸಿಟಿ ಯೋಜನೆಯ ನಿರ್ಮಾಪಕರಾದ ರೋಹನ್ ಕಾರ್ಪೋರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರೋಹನ್ ಮೊಂತೇರೋ ಅವರಿಗೆ ಟೈಮ್ಸ್ ಆಫ್ ಇಂಡಿಯಾ 2023ನೇ ವರ್ಷದ ಉದಯೋನ್ಮುಖ ಯೋಜನೆ ಪ್ರಶಸ್ತಿ ಲಭಿಸಿದೆ.
ಮೈಸೂರಿನ ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಎಸ್‍ಪಿಎದಲ್ಲಿ ನಡೆದ ಟೈಮ್ಸ್ ಬ್ಯುಸಿನೆಸ್ ಅವಾರ್ಡ್ ಸಮಾರಂಭದಲ್ಲಿ ಅವರ ಪರವಾಗಿ ಜನರಲ್ ಮ್ಯಾನೇಜರ್ ದೀಮಂತ್ ಸುವರ್ಣ ಮತ್ತು ಸೇಲ್ಸ್ ಅಸೋಸಿಯೇಟ್ ಅಲ್ಫೋನ್ಸ್ ಫೆರ್ನಾಂಡಿಸ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಟೈಮ್ಸ್ ಬ್ಯುಸ್‍ನೆಸ್ ಅವಾಡ್ರ್ಸ್ 2023ನೇ ಸಾಲಿನ ಪ್ರಶಸ್ತಿಗೆ 37 ಸಂಸ್ಥೆಗಳಲ್ಲಿ ವಿದ್ಯಾವರ್ಧಕ ಶಿಕ್ಷಣ ಟ್ರಸ್ಟ್, ಲಲಿತಾ ಜ್ಯುವೆಲ್ಲರಿ, ಎಸ್‍ಸಿಡಿಸಿಸಿ ಬ್ಯಾಂಕ್, ರೋಹನ್ ಕಾರ್ಪೋರೇಷನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ನಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿವೆ.
ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಸ್ಪಾನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ರಾಶಿ ಖನ್ನಾ ಅವರು ಬಿಸ್‍ನೆಸ್ ಐಕಾನ್‍ಗಳಿಗೆ ಪ್ರಶಸ್ತಿಗಳನ್ನು ನೀಡಿದರು. ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಗಳಾದ ಕೆ.ಎಸ್. ರಂಗಪ್ಪ ಗೌರವ ಅತಿಥಿಗಳಾಗಿದ್ದರು.

Related Posts

Leave a Reply

Your email address will not be published.