ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್-9 ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ

ಕರಾವಳಿ ಕುವರ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್-9 ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ಸಿನಿಮಾ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರೂಪೇಶ್ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಎಂಟ್ರಿಕೊಟ್ಟಿರುವುದು ಕರಾವಳಿಯಲ್ಲಿ ಭಾರೀ ಸಂತಸ ಮೂಡಿದೆ.
ಬಿಗ್ ಬಾಸ್ ಕನ್ನಡ ಸೀಸನ್ 9 ಈ ವಾರ ಮುಕ್ತಾಯಗೊಳ್ಳಲಿದೆ. ಸ್ಪರ್ಧಿಗಳು ಫಿನಾಲೆಯತ್ತ ಸಾಗುತ್ತಿದ್ದಾರೆ. ಪ್ರೇಕ್ಷಕರನ್ನು ಮೆಚ್ಚಿಸಲು ಮತ್ತು ಬಿಗ್ ಬಾಸ್ ಕನ್ನಡ 9 ಟ್ರೋಫಿಯನ್ನು ಪಡೆಯಲು ಹವಣಿಸುತ್ತಿದ್ದಾರೆ.ಇದೀಗ ಕರಾವಳಿಯ ಕುವರ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ.ಕನ್ನಡ ಮತ್ತು ತುಳು ಸಿನಿಮಾದ ಪ್ರತಿಭಾವಂತಹ ನಾಯಕ ನಟನಾಗಿ ಗುರುತಿಸಿಕೊಂಡಿರುವ ರಾಕ್ ರೂಪೇಶ್ ಶೆಟ್ಟಿ, ಬಿಗ್ ಬಾಸ್ ಸೀಸನ್-9 ಗ್ರ್ಯಾಂಡ್ ಫಿನಾಲೆಯ ಅಖಾಡಕ್ಕೆ ಪ್ರವೇಶಿಸಿದ್ದಾರೆ.

ಈಗಾಗಲೇ ಬಿಗ್‍ಬಾಸ್‍ನಲ್ಲಿ ಅತ್ಯುತ್ತಮ ಆಟ ಆಡುವ ಮೂಲಕ, ಪ್ರೇಕ್ಷಕರ ಮನಗೆದ್ದು, ಅಂತಿಮ ಹಂತಕ್ಕೆ ಮುನ್ನುಗುತ್ತಿದೆ. ಇನ್ನೇನು ಕೆಲವೇ ದಿನಗಳು ಗ್ರ್ಯಾಂಡ್ ಫಿನಾಲೆಗೆ ಬಾಕಿ ಇದೆ. ಕೆಲವೇ ದಿನಗಳಲ್ಲಿ ಫಿನಾಲೆಯ ಸಂಚಿಕೆ ಮೂಡಿ ಬರಲಿದೆ. ಫಿನಾಲೆಯಲ್ಲಿ ಐದು ಜನರ ನಡುವೆ ಹಣಾಹಣಿ ನಡೆಯಲಿದ್ದು, ಅಂತಿಮವಾಗಿ ಒಬ್ಬ ಸ್ಪರ್ಧಿಸಿ, ಈ ಬಾರಿಯ ಬಿಗ್ ಬಾಸ್ ಸೀಸನ್-9 ವಿನ್ನರ್ ಆಗಲಿದ್ದಾರೆ. ಇದೀಗ ಫಿನಾಲೆಯಲ್ಲಿ ರೂಪೇಶ್ ಶೆಟ್ಟಿ ಎಂಟ್ರಿಕೊಟ್ಟಿರುವುದು ಕರುನಾಡ ಮಾತ್ರವಲ್ಲದೇ ಕರಾವಳಿಯಲ್ಲೂ ಭಾರೀ ಸಂತಸ ಮೂಡಿದೆ. ಕರಾವಳಿ ಕುವರ ರೂಪೇಶ್ ಶೆಟ್ಟಿ , ಈಗಾಗಲೇ ಜನ ಮೆಚ್ಚಿದ ನಟನಾಗಿ ಗುರುತಿಸಿಕೊಂಡಿರುವ, ಅಭಿಮಾನಿಗಳ ಮನದಲ್ಲಿ ಮೆಚ್ಚಿನ ನಟನಾಗಿ ಹೆಸ್ರು ಪಡೆದುಕೊಂಡಿದ್ದಾರೆ. ರೂಪೇಶ್ ಶೆಟ್ಟಿ ಕೇವಲ ಉತ್ತಮ ನಾಯಕ ನಟ ಮಾತ್ರವಲ್ಲದೇ ನಿರ್ದೇಶಕ ಹೌದು, ಜೊತೆಗೆ ರೋಡಿಯೋ ಜಾಕಿ, ಗಾಯಕ, ಮಾಡೆಲ್, ಮತ್ತು ಅತ್ಯುತ್ತಮ ನಿರೂಪಕ ಕೂಡ, ರೂಪೇಶ್ ಶೆಟ್ಟಿ ಕನ್ನಡ, ತುಳು, ಕೊಂಕಣಿ ಭಾಷೆಯಲ್ಲೂ ನಟಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಆಹಾರ ಕಿಟ್ ಒದಗಿಸುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಾರೆ.