ರೋಟರಿ ಸಂಸ್ಥೆಯಿಂದ ಬೈಕಂಪಾಡಿ ಶಾಲೆಗೆ ಕವಾಟು ಕೊಡುಗೆ

ರೋಟರಿ ಕ್ಲಬ್ ಬೈಕಂಪಾಡಿ, ರೋಟರಿ ಕ್ಲಬ್ ದೇರಳಕಟ್ಟೆ, ರೋಟರಿ ಕ್ಲಬ್ ಮುಲ್ಕಿ ಇವರ ಆಶ್ರಯದಲ್ಲಿ ನಡೆದ ರೋಟರಿ ದತ್ತ ನಿಧಿಯ ಜಿಲ್ಲಾ ಅನುದಾನದ ಅಡಿಯಲ್ಲಿ ರೂಪಾಯಿ 55,೦೦೦/ಮೊತ್ತದ ಪುಸ್ತಕಗಳನ್ನು ಇಡುವ ಕವಾಟನ್ನು ರೋಟರಿ ೩೧೮೧ ಜಿಲ್ಲೆಯ ಪೂರ್ವ ಗವರ್ನರ್ ಹಾಗೂ ರೋಟರಿ ಫೌಂಡೇಶನ್ ಇದರ ಚೇರ್ಮನ್ ಆಗಿರುವ ರೋಟ ರಂಗನಾಥ್ ಭಟ್ ಅವರ ಸಮ್ಮುಖದಲ್ಲಿ ಸರಕಾರಿ ಸoಯುಕ್ತ ಹೈಸ್ಕೂಲ್ ಅಂಗರಗುಂಡಿ , ಬೈಕಂಪಾಡಿ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.


ರೋಟರಿ ಕ್ಲಬ್ ಬೈಕಂಪಾಡಿ ಇದರ ಅಧ್ಯಕ್ಷರಾದ ರೋಟ ಹರೀಶ್ ಬಿ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮದಲ್ಲಿ ರೋಟರಿ ವಲಯ ೨ರ ಸಹಾಯಕ ಗವರ್ನರ್ ರೋ ಟವಿಶ್ವನಾಥ ಶೆಟ್ಟಿ ಎಂ, ರೋಟರಿ ಕ್ಲಬ್ ದೇರಳಕಟ್ಟೆ ಅಧ್ಯಕ್ಷೆ ರೋಟ ಸೌಮ್ಯ ಆರ್ ಶೆಟ್ಟಿ, ವಲಯಸೇನಾನಿ ರೋ ಟ ಗಣೇಶ್ ಎಂ, ಶ್ರೀನಿವಾಸ ಆಸ್ಪತ್ರೆ ಮುಕ್ಕದ ಡಾ. ನಿಖಿಲ್, ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಕಲಾ, ಮುಖ್ಯ ಅತಿಥಿಗಳಾಗಿದ್ದರು. ರೋಟರಿ ಕ್ಲಬ್ ಮುಲ್ಕಿ ಅಧ್ಯಕ್ಷರಾದ ರೋಟ ಪ್ರೀತಮ್ ರವರು ಶುಭ ಹಾರೈಸಿದರು. ಡಾಕ್ಟರ್ ನಿಖಿಲ್ ರವರು ಮಕ್ಕಳಿಗೆ ಆರೋಗ್ಯದ ಕಾಳಜಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರೋಟ ರಂಗನಾಥ್ ಭಟ್ ರವರು ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಪಾತ್ರದ ಬಗ್ಗೆ ಮಕ್ಕಳಿಗೆ ತಿಳಿಸಿದರು ಹಾಗೂ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ರೋಟರಿ ಸಂಸ್ಥೆಯು ಸದಾ ಮುಂಚೂಣಿಯಲ್ಲಿರುತ್ತದೆ ಎಂಬ ಮಾತನ್ನು ತಿಳಿಸಿದರು.
ಇದೇ ವೇಳೆ ಶ್ರೀನಿವಾಸ ಆಸ್ಪತ್ರೆ ಮುಕ್ಕ ಇದರ ನುರಿತ ವೈದ್ಯರಿಂದ ಶಾಲೆಯ ೯೦ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ಪರೀಕ್ಷೆ, ದಂತ ತಪಾಸಣಾ ಶಿಬಿರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ಭರತ್ ಶೆಟ್ಟಿ, ಯೋಗೀಶ್ ನಾಯಕ್, ಅಶೋಕ್ ಎನ್, ಗಂಗಾಧರ್ ಬಂಜನ್, ಹರೀಶ್ ಸನಿಲ್, ಬಿ.ಬಿ. ರೈ, ಕುಮಾರ್ ಕುಳಾಯಿ, ಲೋಕನಾಥ್ ಅಮೀನ್, ಮಹೇಶ್ ಕುಮಾರ್, ಅನಿತಾ ರವಿಶಂಕರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶೈಲಾ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು, ಇಂಟರ್ ನೆಟ್ ಕ್ಲಬ್ ಆರ್ಡಿನೇಟರ್ ಸವಿತಾ ಟೀಚರ್ ವಂದನಾರ್ಪಣೆಗೈದರು.