ಸಕಲೇಶಪುರ : ಮಧ್ಯಾಹ್ನದ ಊಟ ಸವಿದ 35 ಸೈನಿಕರು ಅಸ್ವಸ್ಥ
ಮಧ್ಯಾಹ್ನದ ಊಟ ಸವಿದ 35 ಮಂದಿ ಸೈನಿಕರು ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಡುಗರವಳ್ಳಿ ಗ್ರಾಮದಲ್ಲಿ ಈ ಪ್ರಕರಣ ಜರುಗಿದೆ ಅಸ್ವಸ್ಥಗೊಂಡಂತಹ ಸುಮಾರು 35 ಮಂದಿಯನ್ನು ಸದ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಡುಗರ ಒಳ್ಳೆಯ ಕ್ಯಾಂಪ್‍ನಲ್ಲಿರುವ ವಾಹನ ಚಾಲನಾ ತರಬೇತಿ ಸೈನಿಕರು ಮಧ್ಯಾಹ್ನ ಎಂದಿನಂತೆ ಊಟ ಸವಿದಿದ್ದಾರೆ ಕೆಲ ಸಮಯದಲ್ಲಿ ಸುಮಾರು 35 ಮಂದಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಅವರುಗಳನ್ನ ಸಕಲೇಶಪುರದ ಗ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.