ಸಕಲೇಶಪುರದ ಸರ್ಕಾರಿ ಮಾದರಿ ಶಾಲೆಯಲ್ಲಿ ಅವೈಜ್ಞಾನಿಕ ಶೌಚಾಲಯ, ಶಾಲೆಯ ಶೌಚಾಲಯಕ್ಕೆ ಪಿಟ್ ಗುಂಡಿಯೇ ಇಲ್ಲ !!

ಸಕಲೇಶಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲಿ ಅವೈಜ್ಞಾನಿಕ ಶೌಚಾಲಯದ ಕಾಮಗಾರಿ ನಡೆದಿದ್ದು ಬೆಳಕಿಗೆ ಬಂದಿದೆ. ಯಾವುದೇ ಒಂದು ಶೌಚಾಲಯ ನಿರ್ಮಾಣವಾಗಬೇಕಾದರೆ ಮೊದಲು ಪಿಟ್ ಗುಂಡಿಯನ್ನು ತೆಗೆಸಿ ವ್ಯವಸ್ಥಿತವಾಗಿ ಅದಕ್ಕೆ ಪೈಪ್ ಲೈನ್ ಅಳವಡಿಸಿ ನಂತರ ಶೌಚಾಲಯ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಅವಜ್ಞಾನಿಕ ಕಾಮಗಾರಿ ನಡೆಸಿ ಪಿಟ್ ಗುಂಡಿಯೇ ಇಲ್ಲದೆ ಶೌಚಾಲಯದ ನೀರನ್ನು ಹೊರಗೆ ಬಿಡಲಾಗಿದೆ ಇದರ ಪರಿಣಾಮವಾಗಿ ಕೆಟ್ಟ ದುರ್ವಾಸನೆ ಇಂದ ಪರಿಸರ ಹಾಳಾಗುತ್ತಿದೆ ಮಕ್ಕಳ ವಿದ್ಯಾಭ್ಯಾಸಕ್ಕೂ ಅಡಚಣೆ ಉಂಟಾಗಬಹುದು ಮಕ್ಕಳ ಆರೋಗ್ಯ ಪರಿಸ್ಥಿತಿಗೂ ತೊಂದರೆ ಆಗಬಹುದು. ಶೌಚಾಲಯದ ಕಾಮಗಾರಿ ನಡೆಯುವ ಸಮಯದಲ್ಲಿ ಶಾಲಾ ಆಡಳಿತ ಎಸ್ ಡಿ ಎಂ ಸಿ ಮಂಡಳಿ ಯವರು ನಿಗಾ ಇಟ್ಟಿದ್ದರೆ ವ್ಯವಸ್ಥಿತವಾಗಿ ಕಾಮಗಾರಿ ಮಾಡಿಸಬಹುದಿತ್ತು.

ಕಳೆದ ಒಂದು ವರ್ಷಗಳ ಹಿಂದೆಯೇ ಶಾಸಕ ಕುಮಾರ ಸ್ವಾಮಿ ಯವರಿಗೆ ತಿಳಿಸಿದರು ಕೂಡ ಅವರು ಸಹ ಸ್ಪಂದಿಸಿ ಪುರಸಭೆ ವತಿಯಿಂದ ಪಿಟ್ ಗುಂಡಿ ನಿರ್ಮಾಣ ಮಾಡುವುದಾಗಿ ತಿಳಿಸಿದರು ಪುರಸಭೆ ವತಿಯಿಂದ ಪಿಟ್ ಗುಂಡಿ ಯನ್ನು ಮಾಡಲು ಕ್ರಮ ಕೈಗೊಳ್ಳಲಾಗಿತ್ತು ಆದರೂ ಸಹ ಪುರಸಭೆ ಅಧಿಕಾರಿಯ ಬೇಜವಾಬ್ದಾರಿ ತನದಿಂದ ಪಿಟ್ ಗುಂಡಿ ಕಾಮಗಾರಿ ನಡೆಸಲು ಮೀನಾ ಮೇಷ ಎಣಿಸುತ್ತಿದೆ ಇದರ ಪರಿಣಾಮವಾಗಿ ಶೌಚಾಲಯದ ಕೆಟ್ಟ ದುರ್ವಾಸನೆ ಮಧ್ಯದಲ್ಲಿ ಮಕ್ಕಳಿಗೆ ಪಾಠ ಮಾಡುವ ಪರಿಸ್ಥಿತಿ ಎದುರಾಗಿದೆ.

ಇನ್ನ ಮುಂದೆಯಾದರೂ ಶಾಲೆಯ ಆಡಳಿತ ಮಂಡಳಿ ಎಚ್ಚೆತ್ತು ಪುರಸಭೆ ವತಿಯಿಂದ ಆಗಬೇಕಾಗಿದ್ದ ಪಿಟ್ ಗುಂಡಿಯ ಕಾಮಗಾರಿ ಮಾಡಿಸಲು ಮುಂದಾಗಬೇಕಿದೆ
