ಜೈನರಪವಿತ್ರ ಸ್ಥಳ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣ ಮಾಡದಂತೆ ಪ್ರಧಾನ ಮಂತ್ರಿಯವರಿಗೆ ಅಂತರ್ದೇಶೀಯ ಪತ್ರ ಬರೆಯುವ ಕಾರ್ಯಕ್ರಮ

ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾದ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಪವಾಸಿ ತಾಣ ಮಾಡಲು ಆದೇಶಿಸಿದ್ದು,ಇದು ಜೈನ ಪಾವಿತ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿರುವುದನ್ನ ಖಂಡಿಸಿ, ಡಿಸೆಂಬರ್ 28ರಂದು ಮೂಡಬಿದ್ರೆಯಲ್ಲಿ ಹಕ್ಕೋತ್ತಾಯ ಚಳುವಳಿಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಜೈನ ಸಮುದಾಯದ ಮುಖಂಡರಾದ ಕೆ.ಅಭಯಚಂದ್ರ ಜೈನ್ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ ಸಂಪ್ರದಾಯದಂತೆ ಈ ಕ್ಷೇತ್ರವು ಭೂತಕಾಲ – ವರ್ತಮಾನ ಮತ್ತು ಭವಿಷ್ಯತ್ ಕಾಲದ ಎಲ್ಲಾ ತೀರ್ಥ0ಕರರು ಸಾಧನೆ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುವ ಶಾಶ್ವತ ಸಿದ್ಧಕ್ಷೇತ್ರವಾಗಿರುತ್ತದೆ. ವರ್ತಮಾನ ಕಾಲದ 24 ತೀರ್ಥಂಕರರ ಪೈಕಿ 20 ಜನ ತೀರ್ಥಂಕರರು ಈ ಬೆಟ್ಟದ ಮೇಲೆ ಪುರುಷಾರ್ಥ ಮಾಡಿ ಸಿದ್ಧಪದವಿ ಪ್ರಾಪ್ತಿ ಮಾಡಿರುತ್ತಾರೆ. ದಿನಂಪ್ರತಿ ಸಾವಿರಾರು ಜನ ಜೈನರು ಭಕ್ತಿ ಶ್ರದ್ಧೆಯಿಂದ ಈ ಕ್ಷೇತ್ರದ ದರ್ಶನ ಮಾಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳುತ್ತಾರೆ. ದಿಗಂಬರ ಮತ್ತು ಶ್ವೇತಾಂಬರ ಪಂಥದ ಮುನಿಗಳು, ಆರ್ಯಿಕೆಯರು, ಕ್ಷುಲ್ಲಕರು ಮತ್ತು ಐಲಕರು ಕೂಡಾ ಇಂದಿಗೂ ಅಲ್ಲಿನ ದರ್ಶನ ಮಾಡಿ ಜನ್ಮ ಸಾರ್ಥಕ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರವಾಸಿ ತಾಣವನ್ನಾಗಿ ಮಾಡುವ ಜಾರ್ಖಂಡ್ ರಾಜ್ಯ ಸರಕಾರದ ನಿಲುವಿನಿಂದ ಅಲ್ಪಸಂಖ್ಯಾತ ಜೈನರ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ. ಜೈನರ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸಿ ಅನಾದಿಕಾಲದಿಂದ ಇರುವ ಪುಣ್ಯಭೂಮಿಯ ಪಾವಿತ್ರ್ಯತೆಯನ್ನು ರಕ್ಷಿಸಿ ಈ ಹಿಂದಿನ ಹಾಗೆ ಜೈನರ ಶಾಶ್ವತ ಕ್ಷೇತ್ರವಾಗಿ ಮುಂದಕ್ಕೂ ಅವಕಾಶ ಮಾಡಿಕೊಡುವಂತೆ ಮತ್ತು ಈಗಾಗಲೇ ಪ್ರವಾಸಿ ತಾಣವನ್ನಾಗಿ ಮಾಡಲು ಉದ್ದೇಶಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ರಾಷ್ಟ್ರಪತಿ, ಪ್ರಧಾನಿಗೆ ಹಾಗೂ ಜಾರ್ಖಂಡ್‍ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಲು ಮೌನಮೆರವಣಿಗೆ ಆಯೋಜಿಸಲಾಗಿದೆ ಎಂದು ಅಭಯಚಂದ್ರ ಜೈನ್ ಹೇಳಿದರು.


‘ಸಮ್ಮೇದ ಶಿಖರ್ಜಿ ಬಚಾವೋ’ ಎಂಬ ಶೀರ್ಷಿಕೆಯೊಂದಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಧರ್ಮಬಂಧುಗಳು ಸೇರಿ ಪವಿತ್ರ ತೀರ್ಥಕ್ಷೇತ್ರಗಳನ್ನು ಮೋಜು-ಮಸ್ತಿ ಕೇಂದ್ರಗಳನ್ನಾಗಿ ಪರಿವರ್ತಿಸದಂತೆ ಒತ್ತಾಯಿಸಿ ಪ್ರಧಾನಿಗೆ ಅಂತರ್ದೇಶೀಯ ಪತ್ರ ಬರೆಯುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಮೂಡಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಮತ್ತು ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಡಿ.28ರಂದು ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮೂಡಬಿದ್ರೆಯ ಬಸದಿಯಿಂದ ಮೌನ ಮೆರವಣಿಗೆಯನ್ನು ಸ್ವರಾಜ್ಯ ಮೈದಾನದ ತನಕ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಅಭಯಚಂದ್ರ ಜೈನ್ ತಿಳಿಸಿದ್ರು, ಸುದ್ದಿಗೋಷ್ಠಿಯಲ್ಲಿ ಜೈನ ಸಮುದಾಯದ ಮುಖಂಡರಾದ ಪುಷ್ಪರಾಜ್ ಜೈನ್, ಪ್ರವೀಣ್ ಚಂದ್ರ ಜೈನ್, ಸುದರ್ಶನ್ ಜೈನ ಯುವರಾಜ ಜೈನ್, ಪ್ರದ್ಮಪ್ರಸಾದ್ ಜೈನ್, ಕೆ.ಕೃಷ್ಣಪ್ರಸಾದ್ ಹೆಗ್ಡೆ, ಎಂ.ಆದರ್ಶಜೈನ್ ಉಪಸ್ಥಿತರಿದರು.

Related Posts

Leave a Reply

Your email address will not be published.