ಫೇಮಸ್ ಯೂತ್ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಸಂಪತ್ ಜೆ. ಶೆಟ್ಟಿ ಆಯ್ಕೆ

ಫೇಮಸ್ ಯೂತ್ ಕ್ಲಬ್ (ರಿ) 10ನೇ ತೋಕೂರು ಇದರ ವಾರ್ಷಿಕ ಮಹಾಸಭೆಯನ್ನು ದಿನಾಂಕ 26.01.2027ನೇ ಭಾನುವಾರ ಸಂಸ್ಥೆಯ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರುರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ವಾರ್ಷಿಕ ವರದಿ ಮತ್ತು ಆಯವ್ಯಯದ ಮಂಡನೆಯನ್ನು ಕಾರ್ಯದರ್ಶಿ, ಹಿಮಕರ್ ಕೋಟ್ಯಾನ್ ರವರು ನೆರವೇರಿಸಿಕೊಟ್ಟರು.
ಗೌರವಾಧ್ಯಕ್ಷರಾದ ಶ್ರೀ ಗುರುರಾಜ್ ಪೂಜಾರಿಯವರು ಉಪಸ್ಥಿತರಿದ್ದು ಈ ಹಿಂದಿನ ಆರು ವರ್ಷಗಳ ಕಾಲ ಸಂಸ್ಥೆಯು ಅತ್ಯುತ್ತಮ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುತ್ತದೆ ಈ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದರು.
ಅಧ್ಯಕ್ಷೀಯ ಮಾತಿನಲ್ಲಿ ಶ್ರೀ ಭಾಸ್ಕರ್ ಅಮೀನ್ ರವರು ಮಾತನಾಡಿ ತನ್ನ ಅಧ್ಯಕ್ಷತೆಯ 6 ವರ್ಷಗಳ ಕಾಲ ಸಂಸ್ಥೆಯ ಸದಸ್ಯರ ವಿಶೇಷವಾಗಿ ಮಹಿಳಾ ಮಂಡಲದ ಸದಸ್ಯರ ಸಹಕಾರವನ್ನು ಸ್ಮರಿಸಿದರು. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಜವಾಬ್ದಾರಿ ನೂತನ ಸಮಿತಿಯದ್ದಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರಾಗಿ ಶ್ರೀ ಸಂಪತ್ ಜೆ ಶೆಟ್ಟಿ, ಕಾರ್ಯದರ್ಶಿಯಾಗಿ ಶ್ರೀ ಮೋಹನ್ ದಾಸ್ ದೇವಾಡಿಗ, ಉಪಾಧ್ಯಕ್ಷರಾಗಿ ಶ್ರೀ ಮಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ಶ್ರೀ ನವೀನ್ ಚಂದ್ರ, ಜೊತೆ ಕಾರ್ಯದರ್ಶಿಯಾಗಿ ಶ್ರೀ ಶಂಕರ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಗಳಾಗಿ ಶ್ರೀ ಸಂದೇಶ ಆಚಾರ್ಯ ಮತ್ತು ಝಾಹಿನ್ ಸೇರಿದಂತೆ ಸಂಘಟನಾ ಸಮಿತಿ ಮತ್ತು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ರವರು ಸಂಪತ್ ಜೆ. ಶೆಟ್ಟಿಯವರಿಗೆ ಅಧಿಕಾರ ಹಸ್ತಾಂತರವನ್ನು ನೆರವೇರಿಸಿ ಕೊಟ್ಟರು
ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಸಂಪತ್ ಜೆ ಶೆಟ್ಟಿ ಮತ್ತು ಮೋಹನ್ ದಾಸ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಸಹಕಾರವನ್ನು ಬಯಸಿದರು.ಕಾರ್ಯಕ್ರಮವನ್ನು ಕಾರ್ಯದರ್ಶಿಹಿಮಕರ್ ಕೋಟ್ಯಾನ್ ರವರು ನಿರೂಪಿಸಿದರು

Related Posts

Leave a Reply

Your email address will not be published.