ಫೆ.25 ಮತ್ತು 26 : ವಿಷನ್-2023 ಮತ್ತು ಸಾನಿಧ್ಯ ಉತ್ಸವ

ಮಂಗಳೂರಿನ ಶಕ್ತಿನಗರದ ಸಾನಿಧ್ಯ ರೆಸಿಡೆನ್ಸಿಯಲ್ ಸ್ಕೂಲ್‍ನಲ್ಲಿ ವಿಷನ್-2023 ಹಾಗೂ ಸಾನಿಧ್ಯ ಉತ್ಸವ ಕಾರ್ಯಕ್ರಮವು ಫೆ.25 ಮತ್ತು 26ರಂದು ನಗರದ ಕದ್ರಿ ಉದ್ಯಾನದಲ್ಲಿ ನಡೆಯಲಿದೆ ಎಂದು ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಹೇಳಿದರು.

ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಾನಸಿಕ ಭಿನ್ನ ಸಾಮಥ್ರ್ಯದ ಮಕ್ಕಳಿಗೂ ವಿಶೇಷ ಶಾಲೆಗಳ ಅವಕಾಶ ದೊರಕಬೇಕು. ಆ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶವನ್ನು ಇರಿಸಿಕೊಂಡು ಶ್ರೀ ಗಣೇಶ್ ಸೇವಾ ಟ್ರಸ್ಟ್ ಫಾರ್ ಎಕ್ಸೆಪ್ಶನಲ್ ಪರ್ಸನ್ಸ್ 2003ರಲ್ಲಿ ಮಂಗಳೂರಿನ ಶಕ್ತಿನಗರದಲ್ಲಿ ಸಾನಿಧ್ಯ ಮಾನಸಿಕ ಭಿನ್ನ ಸಾಮಥ್ರ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಇದೀಗ ಸಾನಿಧ್ಯವು 20 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಇದೀಗ ಸಾನಿಧ್ಯ ಸಂಸ್ಥೆಯಲ್ಲಿ ಫೆ.25 ಮತ್ತು 26ರಂದು ವಿಷನ್-2023 ಮತ್ತು ಸಾನಿಧ್ಯ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಭಿನ್ನ ಸಾಮಥ್ರ್ಯದ ಮಕ್ಕಳು ತಮ್ಮ ತರಬೇತಿದಾರರೊಡನೆ ಸೇರಿಕೊಂಡು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ವಿಷನ್-2023 ಫೆ.25ರಂದು ಸಂಜೆ 5.30ಕ್ಕೆ ಪ್ರಾರಂಭಗೊಳ್ಳಲಿದೆ. ವಿಷನ್ -2023ನ್ನು ದ.ಕ. ಜಿಲ್ಲಾ ಪಂಚಾಯತ್‍ನ ಸಿಇಒ ಡಾ ಕುಮಾರ್ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲೆಯ ವಿಕಲಚೇತನರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ, ಜಿಲ್ಲಾ ಬಸ್ ಮಾಲಕರದ ಸಂಘದ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ ಭಾಗವಹಿಸಲಿದ್ದಾರೆ.

ಫೆ.26ರಂದು ಕದ್ರಿ ಉದ್ಯಾನದಲ್ಲಿ ಸಾನಿಧ್ಯ ವಿಶೇಷ ಮಕ್ಕಳ ಸಾಂಸ್ಕøತಿಕ ಪ್ರತಿಭೆಯನ್ನು ತೋರಿಸುವ ಕಾರ್ಯಕ್ರಮ ಸಾನಿಧ್ಯ ಉತ್ಸವ ಜರುಗಲಿದೆ. ಕಾರ್ಯಕ್ರಮವನ್ನು ಎಂಆರ್‍ಜಿ ಗ್ರೂಫ್‍ನ ಚೇರ್‍ಮೆನ್ ಆಗಿರುವ ಪ್ರಕಾಶ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಗೃಹ ರಕ್ಷಕ ದಳದ ಕಮಾಂಡೆಂಟ್ ಹಾಗೂ ವೈದ್ಯರಾದ ಡಾ. ಮುರಳಿ ಮೋಹನ್ ಚೂಂತಾರು ಕ್ಯೂಇಡಿಹೆಚ್‍ಆರ್ ಕನ್ಸಲ್ಟಿಂಗ್ ಕಂಪೆನಿಯ ಸಂಸ್ಥಾಪಕರಾದ ಸುಚಿತ್ರ ರಾಜೇಂದ್ರ, ಉದ್ಯಮಿ ಹರ್ಷ ಮೇಲಾಂಟ, ಮಂಗಳೂರು ಸಂತೋಷ್ ಎರೆಂಜರ್ಸ್‍ನ ನಿರ್ದೇಶಕರಾದ ಸಂತೋಷ್ ಸೀಕ್ವೇರಾ ಅವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಶ್ರೀ ಗಣೇಶ್ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಮಹಾಬಲ ಮಾರ್ಲ, ಖಜಾಂಜಿ ಜಗದೀಶ್ ಶೆಟ್ಟಿ ಸ್ಟೀವನ್ ಪಿಂಟೋ ಉಪಸ್ಥಿತರಿದ್ದರು.

Related Posts

Leave a Reply

Your email address will not be published.