ನಗರದ ಬೊಂದೆಲ್ ನಲ್ಲಿ ಸರ್ವಜ್ಞ ವೃತ್ತ ನಿರ್ಮಾಣ – ಶಾಸಕ ಡಾ. ವೈ ಭರತ್ ಶೆಟ್ಟಿ ಅವರಿಂದ ಉದ್ಘಾಟನೆ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರ ಮುತುವರ್ಜಿಯಿಂದ ಬೊಂದೆಲ್ ಬಳಿ ನಿರ್ಮಾಣವಾದ ಸರ್ವಜ್ಞ ವೃತ್ತವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮುಡಾ ವತಿಯಿಂದ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಿದೆ. ರವಿಶಂಕರ್ ಮಿಜಾರ್ ನೇತೃತ್ವದಲ್ಲಿ ಕೆಲಸ ಆಗಿದೆ. ಕೆರೆ ಅಭಿವೃದ್ಧಿಗೆ ಅನುದಾನ ಕೊಟ್ಟು ಸಹಕರಿಸಿದ್ದಾರೆ ಎಂದು ಶ್ಲಾಘಿಸಿದರು. ಪಾರ್ಕ್ ಅಭಿವೃದ್ಧಿ ಮಾಡಿ ಸುಂದರ ನಗರವನ್ನಾಗಿ ಮಾಡಲು ಸಾಧ್ಯವಾಗಿದೆ.

ಸರ್ವಜ್ಞ ವೃತ್ತ ಮಾಡುದೇ ಒಂದು ಪುಣ್ಯ ಕಾರ್ಯ. ಸರ್ವಜ್ಞನ ವಚನಗಳು ಷಟ್ಪದಿಗಳು ನಮಗೆ ದಾರಿ ದೀಪವಾಗಬೇಕಿದೆ.ಉತ್ತಮ ಸಮಾಜದ ನಿರ್ಮಾಖ್ಕೆ ಇಂತಹ ಮಹಾಪುರುಷರು ನಮಗೆ ನಾದರಿಯಾದಾಗ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದರು. ಕುಲಾಲ ಸಮಾಜದ ಮನವಿ ಮೇರೆಗೆ ಈ ವೃತ್ತವಾಗಿದ್ದು, ಸರ್ವರ ಸಹಕಾರದಲ್ಲಿ ಉತ್ತಮವಾಗಿ ಮೂಡಿ ಬಂದಿದೆ.ಗುತ್ತಿಗೆದಾರರ ಗುಣಮಟ್ಟದ ಕೆಲಸವೂ ಅಗಿದೆ ಎಂದರು.

ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಮಾತನಾಡಿ, ಅಣ್ಣಯ್ಯ ಕುಲಾಲ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮೇಯರ್ ಜಯಾನಂದ, ಮಯೂರ್ ಉಳ್ಳಾಲ್ ಜಿಲ್ಲಾ ಸಂಘ, ಗಂಗಾಧರ ಬಂಜನ್, ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ಸಂಗೀತಾ ಅರ್ .ನಾಯಕ್
ಲೋಹಿತ್ ಅಮೀನ್ ,ಕಿಶೋರ್ ಕೊಟ್ಟಾರಿ
, ಶಕೀಲಾ ಕಾವ,ಹಾಗೂ ಇತರ ಮನಪಾ ಸದಸ್ಯರು, ಸುಕುಮಾರ್ ಬಂಟ್ವಾಳ್ ,ಗುತ್ತಿಗೆದಾರ ಪ್ರತೀಕ್ ಪೂಜಾರಿ ಸೇರಿದಂತೆ ಕುಲಾಲ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.