ರಾಜ್ಯ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪಿಸಲು ಸವಾಕ್ ಒತ್ತಾಯ
ರಾಜ್ಯದ ಕಲಾವಿದರನ್ನು ಉಳಿಸಿ ಬೆಳಸುವ ಉದ್ದೇಶದಿಂದ ಕರ್ನಾಟಕ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪಿಸಬೇಕೆಂದು ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕಸ್ ಅಸೋಸಿಯೇಷನ್ ಆಫ್ ಕರ್ನಾಟಕ (SAWAK) ಸರಕಾರವನ್ನು ಒತ್ತಾಯಿಸಿದೆ. ನಾಡಿನ ಕಲಾವಿದರ ಕಲಾಭಿವೃದ್ಧಿ ಮತ್ತು ಕ್ಷೇಮಾಭಿವೃದ್ಧಿ ಸರಕಾರದ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ಸುಮಾರು 56 ವಿವಿಧ ಕಲೆಗಳಿದ್ದು ಅದಕ್ಕೆ ಸಂಬಂಧಿಸಿದಂತೆ ಕಲಾವಿದರೂ ಇದ್ದಾರೆ. ಇವರೆಲ್ಲ ಸಂರಕ್ಷಣೆಯನ್ನು ಸರಕಾರ ಮಾಡಬೇಕಾಗಿದೆ. ರಾಜ್ಯವು ಸಾಂಸ್ಕೃತಿಕವಾಗಿ ಶ್ರೀಮಂತ ನಾಡಾಗಿದ್ದು, ಸಾಂಸ್ಕೃತಿಕ ಮತ್ತು ಭಾಷೆ ಕಾಪಾಡುವಲ್ಲಿ. ಕಲಾವಿದರ ಪಾತ್ರ ದೊಡ್ಡದ್ದು. ಆದ್ದರಿಂದ ಕೇರಳದಂತೆ ರಾಜ್ಯದಲ್ಲೂ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪಿಸಿ ಕಲಾವಿದರ ಹಿತ್ತಾಶಸ್ತಿ ಕಾಪಾಡಬೇಕು. ಅವರಿಗೆ 4000 ರೂಪಾಯಿ ಪಿಂಚಣಿ, ಆರೋಗ್ಯವೀಮೇ, ಕಲಾವಿದರ ಹೆಣ್ಣು ಮಕ್ಕಳ ಮದುವೆಗೆ ಧನಸಹಾಯ, ಕಲಾವಿದರು ಮೃತಪಟ್ಟಾಗ ಸಹಾಯಧನ ನೀಡುವ ಕೆಲಸವಾಗಬೇಕೆಂದು ಕರ್ನಾಟಕದಲ್ಲಿ ಹೊಸದಾಗಿ ರೂಪೀಕರಣಗೊಂಡ ಸವಾಕ್ ಸಂಘಟನೆಯು ಸರಕಾರವನ್ನು ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷಿಯಲ್ಲಿ ಕರ್ನಾಟಕ ಸವಾಕಿನ ಸಂಚಾಲಕರಾದ ಮಲ್ಲಿಕಾರ್ಜನ ಸ್ವಾಮಿ ಮಹಾಮನೆ, ಶೀಲಾ ಆಲ್‌ಕುರ್ಕಿ, ಮಲ್ಲಯ್ಯ ಶ್ರೀಮಠ, ಉಮೇಶ್ ಎಂ. ಸಾಲಿಯಾನ್, ಸುದರ್ಶನ ವರ್ಣ, ವಿನೋದ್ ಅಂಜುಬಿದ ಮೊದಲಾದವರು ಇದ್ದರು. ಸವಾಕ್ ರೂಪೀಕರಣ ಸಭೆಯಲ್ಲಿ ಸಾಹಿತಿ ಸುಕನ್ಯಮಾರುತಿ, ಟಿ.ವಿ.ಗಂಗಾಧರನ್, ಜೀನ್‌ಲೆವಿನೋ ಮೊಂಥೆರೋ, ಭಾರತಿ ಬಾಬು, ರಂಗ ಸ್ವಾಮಿ ಮುಂತಾದವರು ಮಾತನಾಡಿದರು. ಕಲಾವಿದ ತನ್ನ ಕಲೆಯನ್ನು ಸುರಕ್ಷಿಸಿಕೊಂಡು ಬದುಕಲು ದುಸ್ಸಾಹಸ ಪಡಬೇಕಾಗಿದೆ. ಆತನಿಗೆ ಮೂಲಭೂತ ಸೌಕರ್ಯಬೇಕಾಗಿದೆ. ಕಲಾವಿದರನ್ನೆಲ್ಲ ಒಗ್ಗೂಡಿಸಿ ರಾಜ್ಯಾಧ್ಯಂತ ಸವಾಕನ್ನು ಸಂಘಟನೆಯನ್ನು ಸಂಘಟಿಸಲಿದ್ದೇವೆಂದು ತಿಳಿಸಿದರು.