ಸವಣೂರು : ಮಾ.ಧನ್ವಿತ್ ಚಿಕಿತ್ಸೆಗೆ ಮನವಿ

ಎಲ್ಲಾ ಮಕ್ಕಳಂತೆ ಆಟದಲ್ಲೂ ಪಾಠದಲ್ಲೂ ಸದಾ ಚಟುವಟಿಕೆಯಿಂದ್ದಿದ್ದ 13 ವರ್ಷದ ಬಾಲಕ ಸವಣೂರಿನ ಧನ್ವಿತ್ ಈಗ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಎರಡು ತಿಂಗಳ ಹಿಂದೆ ವಾಂತಿ ಕಾಣಿಸಿಕೊಂಡ ಈತನಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದರೂ ಫಲಕಾರಿ ಆಗಲಿಲ್ಲ.

ಬಳಿಕ ಮಂಗಳೂರಿನ ಕೆ. ಎಂ.ಸಿಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸಿದೇ ಮಂಗಳೂರಿನ ಫಸ್ಟ್ ನ್ಯೂರೊಗೆ ದಾಖಲಿಸಲಾಯಿತು. ಇಲ್ಲಿ ಈತನಿಗೆ ಮೆದುಳು ಸಂಬಂಧಿ ಖಾಯಿಲೆಯ ಜೊತೆಗೆ ಮೆದುಳಿನ ಕ್ಷಯ ಇರುವುದಾಗಿ ವೈದ್ಯರು ತಿಳಿಸಿ ತಲೆಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅಲ್ಲಿಯವರೆಗೆ ಸಾಲ ಮಾಡಿ ಸುಮಾರು 4ಲಕ್ಷ ಆಸ್ಪತ್ರೆ ಬಿಲ್ ಪಾವತಿಸಿ ಮನೆಗೆ ಬಂದ ಧನ್ವಿತ್ ನ ಆರೋಗ್ಯ 10 ದಿವಸದಲ್ಲಿ ಹದಗೆಟ್ಟು ನಡೆಯಲಾಗದ ಸ್ಥಿತಿ ತಲುಪಿದ್ದು, ಬಳಿಕ ಫಸ್ಟ್ ನ್ಯೂರೋ ಗೆ ದಾಖಲಿಸಿದ್ದಾರೆ. ಇಲ್ಲಿನ ವೈದ್ಯರು 5 ದಿನ ಚಿಕಿತ್ಸೆ ನೀಡಿದ್ದು, ಮುಂದೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದಾರೆ. ಈಗಾಗಲೇ ಆಸ್ಪತ್ರೆ ಬಿಲ್ ಮತ್ತೆ 50 ಸಾವಿರ ದಾಟಿದ್ದು, ಬಡ ಕುಟುಂಬ ಆಸ್ಪತ್ರೆ ಬಿಲ್ ಕಟ್ಟಲು ಪರದಾಟ ನಡೆಸುವಂತಾಗಿದೆ. ಸದಾ ಲವಲವಿಕೆಯಿಂದ ಇರುತ್ತಿದ್ದ ಧನ್ವಿತ್ ನ ಎಲ್ಲಾ ಕನಸುಗಳಿಗೂ, ವಿದ್ಯಾಭ್ಯಾಸಕ್ಕೂ ತಡೆಯಾಗುತ್ತಿದೆ ಮಾರಕವಾದ ಕಾಯಿಲೆ.

ಪುತ್ತೂರು ತಾಲೂಕಿನ ಸವಣೂರು ಗ್ರಾಮದಲ್ಲಿ ಎಂಬಲ್ಲಿ ವಾಸವಿರುವ ಮೋಹನ ಹಾಗೂ ವನಿತಾ ದಂಪತಿಗಳ ಪ್ರೀತಿಯ ಪುತ್ರ 13 ವರ್ಷದ ಧನ್ವಿತ್ ಎಂಬ ಬಾಲಕ ಕೆಲವು ತಿಂಗಳಿಂದ ಮೆದುಳು ಸಂಬಂಧಿಸಿ ಖಾಯಿಲೆಯಿಂದ ಬಳಲುತ್ತಿದ್ದು, ಈತನ ಜೀವ ಉಳಿಸಲು ಕುಟುಂಬವೂ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದು ಇನ್ನು ಮುಂದೆ ದಿಕ್ಕು ತೋಚದೆ ಹೆತ್ತವರು ಮಗನ ಜೀವ ಉಳಿಸಲು ಸಮಾಜದ ಮುಂದೆ ಬಂದು ಸಹಾಯವನ್ನು ಕೋರುತ್ತಿದ್ದಾರೆ. ಈ ಕಾಯಿಲೆಯನ್ನು ಸಂಪೂರ್ಣ ಗುಣಮುಖವಾಗಿಸಲು ಬಾಲಕನ ಮನವಿಯನ್ನು ಜಾತಿ, ಧರ್ಮ ಇದ್ಯಾವುದು ನೋಡದೆ ಪುರಸ್ಕರಿಸಿ ನಿಮ್ಮ ಕೈಯ್ಯಲ್ಲಾಗುವ ಸಹಾಯ ಮಾಡಬೇಕೆಂದು ನಾವೂ ಕೋರುತ್ತಿದ್ದೇವೆ.

ಧನ್ವಿತ್ ಬ್ಯಾಂಕ್ ಖಾತೆ ವಿವರ
ಹೆಸರು : ಧನ್ವಿತ್ ಎಂ ಎಸ್
ಬ್ಯಾಂಕ್ ಖಾತೆ ಸಂಖ್ಯೆ : 02122200065605
ಐ. ಎಫ್. ಎಸ್ ಸಿ: CNRB0010212
ಕೆನರಾ ಬ್ಯಾಂಕ್ ಸವಣೂರು ಶಾಖೆ
ಮೊಬೈಲ್ : 8762549205
