ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೈನ್ಸ್ ಕ್ಲಬ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನ

ಕಡಬ :ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೈನ್ಸ್ ಕ್ಲಬ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನವನ್ನು (Science Model) ಏರ್ಪಡಿಸಲಾಗಿತ್ತು.
ಕುಮಾರಸ್ವಾಮಿ ಪಿ ಯು ಕಾಲೇಜ್, ಸುಬ್ರಮ್ಮಣ್ಯ ಇದರ ಪ್ರಾಂಶುಪಾಲರಾದ ಡಾ l ಸಂಕೀರ್ತ್ ಹೆಬ್ಬಾರ್ ಇವರು ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ವಿಜ್ಞಾನದ ಮಹತ್ವವನ್ನು ತಿಳಿಸುವುದರೊಂದಿಗೆ ವಿಜ್ಞಾನದ ಕುರಿತು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರಾದ ವಂದನೀಯ ಪ್ರಕಾಶ್ ಪೌಲ್ ಡಿಸೋಜಾ ವಿಜ್ಞಾನವು ನಮ್ಮ ಸಮಾಜದ ಬೆನ್ನೆಲುಬು. ನಮ್ಮ ಸಮಾಜದ ಅಭಿವೃದ್ಧಿಯಲ್ಲಿ ವಿಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲರಾದ ಅಮಿತ್ ಪ್ರಕಾಶ್ ರೋಡ್ರಿಗಸ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ದಕ್ಷ, ಸೈನ್ಸ್ ಕ್ಲಬ್ ಶಿಕ್ಷಕರಾದ ಶ್ರೀಮತಿ ಆಶಾರಾಣಿ ಮತ್ತು ಕುಮಾರಿ ಫಿಲೋಮಿನ ಉಪಸ್ಥಿತರಿದ್ದರು.
ಸೈನ್ಸ್ ಕ್ಲಬ್ ಸದಸ್ಯರಾದ ಕುಮಾರಿ ತೇಜಸ್ವಿನಿ ಸ್ವಾಗತಿಸಿ, ಪ್ರದೀಶ್ ವಂದಿಸಿದರು. ಕಾರ್ಯಕ್ರಮವನ್ನು ಯಶಿಕಾ ಮತ್ತು ಸಾನ್ವಿ ನಿರೂಪಿಸಿದರು.