ಉಜಿರೆ ಎಸ್. ಡಿ. ಎಂ. ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆ

ಉಜಿರೆ :  ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಉಜಿರೆಯ ಶ್ರೀ ಧ. ಮಂ. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕರಾದ ಸಂಪತ್ ಕುಮಾರ್. ಕೆ ರವರು ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
           “ಉತ್ತಮ ಸಂವಹನ ಕೌಶಲ್ಯ, ಹೊಸ ವಿಷಯಗಳ ತಿಳಿಯುವ ಉತ್ಸುಕತೆ ಹಾಗೂ ಏಕಾಗ್ರತೆಯ ಕಾರ್ಯಗಳಿಂದ ಮನುಷ್ಯನ ವ್ಯಕ್ತಿತ್ವ ವಿಕಸನವಾಗುತ್ತದೆ. ಯುವ ರೆಡ್ ಕ್ರಾಸ್ ಘಟಕವು ವಿದ್ಯಾರ್ಥಿಗಳಲ್ಲಿ ಸಹಾಯದ ಮನೋಭಾವನೆಯನ್ನು ಮೂಡಿಸಿ ಸರ್ವತೋಮುಖ ಬೆಳವಣಿಗೆಗೆ ನೆರವು ನೀಡುತ್ತದೆ. ರಕ್ತದಾನದಂತಹ ಶ್ರೇಷ್ಠ ದಾನಗಳಿಂದ ಇತರರ ಬಾಳಿಗೆ ಬೆಳಕಾಗಬಹುದಾಗಿದೆ” ಎಂದು ಹೇಳಿದರು.
            ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಕಾರ್ಯಕ್ರಮ ಸಂಯೋಜಕಿಯಾದ ಪೂಜಿತಾ ವರ್ಮಾರವರು ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ದೀಕ್ಷಾ ಮತ್ತು ದಿವಾಕರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕಶ್ಮಿನ್ ನಿರೂಪಿಸಿದರು. ಸನಾ ಸ್ವಾಗತಿಸಿ, ರೋಶಿತ ವಂದಿಸಿದರು. 

Related Posts

Leave a Reply

Your email address will not be published.