ಉಜಿರೆಯ ಎಸ್.ಡಿ.ಎಂ ನ ಕಾಮರ್ಸ್ ಅಸೊಸಿಯೆಶನ್ ಉದ್ಘಾಟನೆ

ಇಂದಿನ ಯುವಶಕ್ತಿಯು ಕಾರ್ಪೊರೇಟ್ ಜಗತ್ತಿನಲ್ಲಿ ಮೆಲ್ಗೈಯನ್ನು ಸಾದಿಸುತ್ತಿದೆ. ಯುವಜನತೆಯು ಏನನ್ನಾದರೂ ಸಾಧಿಸುತ್ತದೆ ಅಂತಹ ಸಾಮರ್ಥ್ಯ, ಬುದ್ಧಿಶಕ್ತಿ ಯುವಕರಿಗಿದೆ ಎಂದು ಉಜಿರೆಯ ಎಸ್.ಡಿ.ಎಂ ಸೊಸೈಟಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ವೈ ಹರೀಶ್ ಅಭಿಪ್ರಾಯ ಪಟ್ಟರು. 

ಉಜಿರೆಯ ಶ್ರೀ.ಧ.ಮ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕಾಮರ್ಸ್ ಕ್ಯಾಂಪಸ್  ಅಸೊಸಿಯೆಶನ್’ನ ಉದ್ಘಾಟನೆಯ ಸಂಧರ್ಭದಲ್ಲಿ ಮಾತನಾಡುತ್ತಿದ್ದರು. 

     ಯುವಜನತೆ   ಯಾವುದೇ ತಪ್ಪುಗಳಿಲ್ಲದೆ  ಜೀರೋ ಎರೊರ್ರ್ಸ್ ಆಗಬೇಕು  ಎಂದು ಕಾಲೇಜಿನ ಪ್ರಿನ್ಸಿಪಾಲ್ ಪಿ.ಎನ್ ಉದಯ ಚಂದ್ರ ಹೇಳಿ ವಿದ್ಯಾರ್ಥಿಗಳಿಗೆ ಶುಭಕೋರಿದರು.

       ಕಾಮರ್ಸ್ ಕ್ಯಾಂಪಸ್ ಅಸೊಸಿಯೆಶನ್  ವಿದ್ಯಾರ್ಥಿಗಳಿಂದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಬಳಿಕ ಬಿತ್ತಿ ಪತ್ರಿಕೆಗಳ ಬಿಡುಗಡೆ ನಡೆಯಿತು. ಕಳೆದ ವರ್ಷ ಹೆಚ್ಚು ಅಂಕ ಗಳಿಸಿದ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. 

      ಈ ಸಂದರ್ಭದಲ್ಲಿ ಕಾಲೇಜ್’ನ ಕಾಮರ್ಸ್ ಡೀನ್ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೆಷನ್’ನ ಮುಖ್ಯಸ್ಥೆ ಶಕುಂತಲಾ, ಕಾಮರ್ಸ್ ವಿಭಾಗದ ಮುಖ್ಯಸ್ಥೆ ಡಾ.ರತ್ನಾವತಿ, ಎಂ.ಕಾಂ  ವಿಭಾಗದ ಮುಖ್ಯಸ್ಥೆ ಡಾ.ಪ್ರಿಯಾ ಕುಮಾರಿ , ಪಿ.ಯು ಕಾಮರ್ಸ್ ಮುಖ್ಯಸ್ಥೆ ಬೇಬಿ.ಎನ್, ಸಿಬ್ಬಂದಿ ಸಂಯೊಜಕ ಸುಮನ್ ಜೈನ, ಶರಶ್ಚಂದ್ರ ಕೆ.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚರಣ್ ರಾಜ್ ಮತ್ತು ಕೃತಿ ಜೈನ ನಿರೂಪಿಸಿದರು, ಸ್ವಾಗತ ಶಾರ್ವರಿ ಪಿ. ಭಟ್, ವಂದನಾರ್ಪಣೆ ಸಾಮ್ಯಾ ಸುಕುಮಾರನ್ ನಿರ್ವಹಿಸಿದರು.

Related Posts

Leave a Reply

Your email address will not be published.