ಎಸ್.ಡಿ.ಎಂ ಕೆಮಿಸ್ಟ್ರಿ ವಿಭಾಗದ ಕಾಂಕೆಮ್ ಚಟುವಟಿಕೆಗಳಿಗೆ ಚಾಲನೆ

ಉಜಿರೆ, ಡಿ.12: ವೈಜ್ಞಾನಿಕ ವಲಯವನ್ನು ಪ್ರತಿನಿಧಿಸುವ ಯುವ ಪ್ರತಿಭಾನ್ವಿತರು ಔದ್ಯಮಿಕ ಕ್ಷೇತ್ರದ ಸಾಧ್ಯತೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಯೋಗಶೀಲ ಹೆಜ್ಜೆಗಳನ್ನಿರಿಸಿ ಯಶಸ್ಸು ಸಾಧಿಸುವ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯಬೇಕು ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಜಯಕುಮಾರ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಯುವರಸಾಯನಶಾಸ್ತ್ರಜ್ಞರ ವೇದಿಕೆಯಾದ ಕಾಂಕೆಮ್‍ನ ಪ್ರಸಕ್ತ ವರ್ಷದ ರಚನಾತ್ಮಕ ಚಟುವಟಿಕೆಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಇರುವ ಎರಡನೇ ಅತಿದೊಡ್ಡ ರಾಷ್ಟ್ರ ಎಂದು ಭಾರತ ಗಮನ ಸೆಳೆದಿದೆ. ಅತಿಹೆಚ್ಚು ಸಂಖ್ಯೆಯಲ್ಲಿರುವ ಯುವಕರು ಇಡೀ ಜಗತ್ತಿನ ಗಮನ ಸೆಳೆಯುವಂಥ ಸಾಧನೆಯೊಂದಿಗೆ ಗುರುತಿಸಿಕೊಂಡ ಕಾರಣಕ್ಕಾಗಿಯೇ ರಾಷ್ಟ್ರಕ್ಕೆ ವಿಶೇಷ ಆದ್ಯತೆ ದೊರಕಿದೆ. ರಾಷ್ಟ್ರದ ಈ ಹೆಗ್ಗಳಿಕೆಗೆ ಅನುಗುಣವಾಗಿ ಹೊಸ ಪೀಳಿಗೆಯು ಸಾಧನೆಯ ಮಹತ್ವಾಕಾಂಕ್ಷೆಯನ್ನಿರಿಸಿಕೊಂಡು ಮುಂದಡಿಯಿಡಬೇಕು ಎಂದು ಸಲಹೆ ನೀಡಿದರು.

sdm ujire

ಯುವ ಸಂಪನ್ಮೂಲದ ಜ್ಞಾನ ಮತ್ತು ಕೌಶಲ್ಯವು ರಸಾಯನಶಾಸ್ತ್ರದ ಸಂಶೋಧನಾ ವಲಯ ಮತ್ತು ಔದ್ಯಮಿಕ ರಂಗದಲ್ಲಿ ಉನ್ನತ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಅಧ್ಯಯನ ನಿರತರಾದಾಗಲೇ ಈ ಅವಕಾಶಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ಯೋಚಿಸಬೇಕು. ಇಂಥ ಯೋಚನೆಯೊಂದಿಗಿನ ಯೋಜನೆಗಳು ವೃತ್ತಿಪರ ಸಾಧನೆಗೆ ಅಡಿಪಾಯ ಹಾಕಿಕೊಡುತ್ತವೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಂಗಳೂರಿನ ಸುಧಿಶುಭ ಕೆಮ್‍ಸಿಂಥಾನ್ಸ್ ಎಲ್‍ಎಲ್‍ಪಿ ಸಂಸ್ಥೆಯ ರಸಾಯನಶಾಸ್ತ್ರ ಕಾರ್ಯನಿರ್ವಹಣಾ ವಿಭಾಗದ ಸಂಸ್ಥಾಪಕ ಮುಖ್ಯಸ್ಥರಾದ ಡಾ.ಗುರುರಾಜ ಎಂ ಶಿವಶಿಂಪಿ ಅವರು ರಸಾಯನಶಾಸ್ತ್ರ ಸಂಬಂಧಿತ ಕ್ಷೇತ್ರಗಳಲ್ಲಿ ಲಭ್ಯವಿರುವ ವೃತ್ತಿಪರ ಉನ್ನತ ಅವಕಾಶಗಳ ಮಾಹಿತಿ ನೀಡಿದರು. ವೈಜ್ಞಾನಿಕ ಅಂಶಗಳನ್ನು ತಿಳಿದುಕೊಳ್ಳುವ ಕುತೂಹಲದೊಂದಿಗೆ ಉದ್ಯಮ ವಲಯದಲ್ಲಿ ಆಗುತ್ತಿರುವ ಹೊಸ ಬೆಳವಣ ಗೆಗಳ ಕಡೆಗೂ ಹೆಚ್ಚಿನ ಗಮನವಿರಬೇಕು. ಹಾಗಾದಾಗ ಮಾತ್ರ ಸ್ನಾತಕೋತ್ತರ ಅಧ್ಯಯನ ಹಂತ ಪೂರ್ಣಗೊಳ್ಳುವಷ್ಟರಲ್ಲಿ ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಕೌಶಲ್ಯ ರೂಢಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಮತ್ತು ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರೂ ಆದ ಡಾ.ವಿಶ್ವನಾಥ ಪಿ ಅವರು ಗ್ರಂಥಾಲಯದ ಜ್ಞಾನ ಸಂಪನ್ಮೂಲಗಳು, ಪ್ರಯೋಗಾಲಯದ ಆವಿಷ್ಕಾರದ ಹೆಜ್ಜೆಗಳು ಮತ್ತು ಬೋಧಕ ವರ್ಗದ ಪರಿಣ ತಿಯನ್ನು ಪೂರಕವಾಗಿಸಿಕೊಂಡು ಔದ್ಯಮಿಕ ವೃತ್ತಿಪರ ಸಾಮಥ್ರ್ಯವನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾಂಕೆಮ್ ವೇದಿಕೆಯ ಕಾರ್ಯದರ್ಶಿ ಡಾ.ನೆಫಿಸತ್ ಪಿ ಕಾಂಕೆಮ್ ವೇದಿಕೆಯ ರಚನಾತ್ಮಕ ಸ್ವರೂಪದ ಸಮಗ್ರ ಮಾಹಿತಿ ನೀಡಿದರು. ಪ್ರತಿಯೊಂದು ವರ್ಷದಲ್ಲೂ ವಿನೂತನ ಕಾರ್ಯಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣ ಕ ಸಾಮಥ್ರ್ಯಕ್ಕನುಗುಣವಾದ ವೃತ್ತಿಪರ ಕೌಶಲ್ಯವನ್ನು ವಿಸ್ತರಿಸಿ ಔದ್ಯಮಿಕ ವಲಯವನ್ನು ಪ್ರವೇಶಿಸುವುದಕ್ಕೆ ಬೇಕಾದ ಪೂರಕ ಕಾರ್ಯಕ್ರಮಗಳನ್ನು ಈ ವೇದಿಕೆ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ತಿಳಿಸಿದರು. ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು.
ಅನುರಾಧ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸಿಂಚನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಜಂಟಿ ಕಾರ್ಯದರ್ಶಿ ಅಶೋಕ್ ವಂದಿಸಿದರು.

Related Posts

Leave a Reply

Your email address will not be published.