ಎಚ್ಚರಿಕೆಯ ಬಳಕೆದಾರ ಹಾಗೂ ಗ್ರಾಹಕರಾಗಬೇಕು : ಡಾ. ಎ. ಜಯಕುಮಾರ್ ಶೆಟ್ಟಿ 

ಹಿಂದಿನ ಕಾಲದಲ್ಲಿ ಗ್ರಾಹಕನಿಗಿಂತ ವ್ಯಾಪಾರಸ್ಥನ ಹಿತಾಸಕ್ತಿಯನ್ನು ಗಮನಿಸಲಾಗುತ್ತಿತ್ತು, ಗ್ರಾಹಕರ ಆಯ್ಕೆಗೆ ಅವಕಾಶ ಇರುತ್ತಿರಲಿಲ್ಲ. ಆದರೆ ಗ್ರಾಹಕರ ಸಂರಕ್ಷಣಾ ಕಾಯ್ದೆ, 1986 ಚಾಲ್ತಿಗೆ ಬಂದ ನಂತರ ಗ್ರಾಹಕರಿಗೂ ಮಾರುಕಟ್ಟೆಯಲ್ಲಿ ಮಹತ್ವ ದೊರಕಿತು. ನಾವು ಜಾಗೃತ ಹಾಗೂ ಎಚ್ಚರಿಕೆಯ ಬಳಕೆದಾರ ಹಾಗೂ ಗ್ರಾಹಕರಾಗಬೇಕು ಎಂದು ಶ್ರೀ ಧ. ಮಂ ಕಾಲೇಜಿನ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಹೇಳಿದರು. 

 ಉಜಿರೆ ಶ್ರೀ ಧ. ಮಂ ಕಾಲೇಜಿನ ವಾಣಿಜ್ಯ ವಿಭಾಗವೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಗ್ರಾಹಕರ ಹಕ್ಕುಗಳ ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

       ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ರತ್ನಾವತಿ ಕೆ. ಇವರು ವಿದ್ಯಾರ್ಥಿಗಳಿಗೆ ಗ್ರಾಹಕ ದಿನದ ಮಹತ್ವ ತಿಳಿಹೇಳಿ ಶುಭ ಹಾರೈಸಿದರು. 

 ಈ ಸಂದರ್ಭ ವಿದ್ಯಾರ್ಥಿಗಳು ಜಾಗೃತ ಗ್ರಾಹಕರಾಗುತ್ತೇವೆಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ವಿದ್ಯಾರ್ಥಿಗಳು ಎರಡು ತಂಡಗಳಾಗಿ ಮಾಡಿಕೊಂಡು ಒಂದು ತಂಡ ಕಾಲೇಜಿನ ಎಲ್ಲಾ ತರಗತಿಗಳಿಗೂ ತೆರಳಿ ಪ್ರತಿಜ್ಞೆಯೊಂದಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರೆ, ಇನ್ನೊಂದು ತಂಡ ಉಜಿರೆ ಪೇಟೆಯಲ್ಲಿ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಪ್ರೊ.ಭಾನುಪ್ರಕಾಶ್.ಬಿ.ಇ. ಹಾಗೂ ಪ್ರೊ. ಫಾತಿಮಾ ಸಫೀರಾ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರಿತು. ವಿಭಾಗದ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.

    ವಿದ್ಯಾರ್ಥಿನಿ ವಂದಿತಾ ಪ್ರಭು ಪ್ರತಿಜ್ಞಾ ವಿಧಿ ಬೋಧಿಸಿದರೆ ಮಹಿಮಾ ಹೆಬ್ಬಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

Related Posts

Leave a Reply

Your email address will not be published.