ಪತ್ರಿಕೋದ್ಯಮಕ್ಕೆ ವೃತ್ತಿ ಒಲವು ಮುಖ್ಯ

ಉಜಿರೆ ಎಸ್.ಡಿ. ಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಥಮ ವರ್ಷದ ಎಂ.ಸಿ.ಜೆ ವಿದ್ಯಾರ್ಥಿಗಳಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ಕ್ರೈಂ ರಿಪೋರ್ಟರ್ ಸುನಿಲ್ ಧರ್ಮಸ್ಥಳ ವೃತ್ತಿ ಕುರಿತು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಪೋಲಿಸ್ ಸ್ತರಗಳು ಮತ್ತು ಅದರೊಳಗಿನ ವಿಭಾಗಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಸುದ್ದಿಗಾರ ರಾಗ ಬಯಸುವವರು ಹೇಗೆ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡಿರಬೇಕು, ಮತ್ತು ಮಾಹಿತಿ ಇಲ್ಲದೆ ಹೋದರೆ ಆಗುವ ಅಚಾತುರ್ಯಗಳ ಕುರಿತು ತಿಳಿಸಿದರು. ಪತ್ರಿಕೋದ್ಯಮ ವೃತ್ತಿಯು ಅತೀ ಹೆಚ್ಚು ವೃತ್ತಿ ಪ್ರೀತಿಯನ್ನು ಹಾಗೂ ಹೆಚ್ಚು ತೋಡಗಿಸಿಕೊಳ್ಳುವಿಕೆಯನ್ನು ಬೇಡತ್ತದೆ ವೃತ್ತಿಯೆಡೆಗೆ ಅತಿಯಾದ ಒಲವನ್ನು ಹೊಂದಿದ್ದರೆ ಮಾತ್ರ ಅಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರು.

ಸುದ್ದಿಗಾರರಿಗೆ ಅದರಲ್ಲಿಯೂ ಅಪರಾಧಗಳನ್ನು ವರದಿ ಮಾಡುವವರಿಗೆ ಸುದ್ದಿ ಮೂಲಗಳು ಅತೀ ಮುಖ್ಯವಾಗತ್ತದೆ, ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರೆ ಮಾತ್ರ ಹೆಚ್ಚು ವಿಷಯ ಸಂಗ್ರಹ ಸಾಧ್ಯ ಎಂದರು. ಮಾಧ್ಯಮದಲ್ಲಿ ಕೆಲಸ ಮಾಡವವರಿಗೂ ವೃತ್ತಿ ಧರ್ಮವು ಮುಖ್ಯವಾಗುತ್ತದೆ, ವಿಶ್ವಾಸ ಅತೀ ಹೆಚ್ಚು ಲಾಭತಂದುಕೊಡುತ್ತದೆ ಎಂದರು.ಮಾತಿನ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತೊಡಗಿದ ಅವರು ಅಪರಾಧಗಳಿಗೆ ಮುಖ್ಯ ಕಾರಣ, ಅಪರಾಧಗಳ ರೀತಿ, ಕೊಲೆ ಹಾಗೂ ಇತರೆ ಸನ್ನಿವೇಶಗಳನ್ನು ನೋಡುವಾಗ ಎದುರಿಸುವ ಕಷ್ಟಗಳು ಮತ್ತು sಹಲವು ವಿಷಯಗಳ ಕುರಿತು ತಮ್ಮ ಅನುಭವಗಳ ಸಹಿತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕ ಸುನೀಲ್ ಹೆಗ್ಡೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published.