ಉಳ್ಳಾಲ ನಗರಸಭೆಯ ದುರಾಡಳಿತ ಮತ್ತು ಅವ್ಯವಹಾರದ ವಿರುದ್ಧ ನಗರಸಭಾ ಕಛೇರಿಗೆ ಮುತ್ತಿಗೆ : ಎಸ್ ಡಿಪಿಐ

ಉಳ್ಳಾಲ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಉಳ್ಳಾಲ ನಗರಸಭೆಯಲ್ಲಿ ಕಾಮಗಾರಿ, ಲೈಸೆನ್ಸ್ , ಡೋರ್ ನಂಬರ್, ತೆರಿಗೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿದ್ದು ಇಲ್ಲಿನ ಆಡಳಿತ ಪಕ್ಷ ಮತ್ತು ಅಧಿಕಾರಿಗಳು ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿದೆ. ಅನುದಾನ ಬಿಡುಗಡೆ ಸಂದರ್ದಲ್ಲೂ ತಾರತಮ್ಯ ನೀತಿಯನ್ನು ಆಡಳಿತ ಮಂಡಳಿ ಅನುಸರಿಸುತ್ತಿದೆ . ಇಲ್ಲಿ ನಡೆಯುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಮತ್ತು ಪಕ್ಷೇತರ ಸದಸ್ಯರು ಬಹಿಂರಂಗವಾಗಿ ನಗರಸಭೆ ಒಳಗೆ ನಡೆಯುವ ಕರ್ಮಕಾಂಡದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಅತಂಕಕ್ಕೊಳಗಾದ ನಗರಸಭೆ ಅಧ್ಯಕ್ಷರು ಮತ್ತು ಇತರ ಸದಸ್ಯರು ಪತ್ರಿಕಾ ಗೋಷ್ಠಿ ಕರೆದು ಅರೋಪ ಮಾಡಿದ ತಮ್ಮದೇ ಪಕ್ಷದ ಕೌನ್ಸಿಲರ್ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಘಟನೆಯ ಬಗ್ಗೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ

ಇದೀಗ ಉಳ್ಳಾಲ ನಗರಸಭೆಯ ಜನವಿರೋಧಿ ನಿಲುವುಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟಹಾಕಿದೆ .
ನಗರಸಬೆಯ ಆಡಳಿತ ವೈಫಲ್ಯಗಳು ಮತ್ತು ಅವ್ಯವಹಾರದ ವಿರುದ್ಧ SಆPI ಉಳ್ಳಾಲ ನಗರಸಭಾ ಸಮಿತಿಯ ವತಿಯಿಂದ ದಿನಾಂಕ 23/09/2022 ಶುಕ್ರವಾರದಂದು ಸಾಯಂಕಾಲ 4;30 ಗಂಟೆಗೆ ಉಳ್ಳಾಲ ನಗರಸಭಾ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು , ಈ ಪ್ರತಿಭಟನೆಗೆ ಎಲ್ಲಾ ಕಾರ್ಯಕರ್ತರು, ನಾಗರಿಕರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು SಆPI ಉಳ್ಳಾಲ ನಗರ ಸಮಿತಿಯ ಅದ್ಯಕ್ಷರಾದ ಅಬ್ಬಾಸ್ ಎ ಆರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Posts

Leave a Reply

Your email address will not be published.