ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ ಆಯ್ಕೆ

ಮಂಗಳೂರು ಪ್ರೆಸ್ ಕ್ಲಬ್‌ನ 2024ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ ಐವರು ಹಿರಿಯ ಪತ್ರಕರ್ತರು ಆಯ್ಕೆಯಾಗಿದ್ದಾರೆ.
ಮುಹಮ್ಮದ್ ಆರೀಫ್ ಪಡುಬಿದಿರೆ (ವಿಜಯ ಕರ್ನಾಟಕ), ಜಿತೇಂದ್ರ ಕುಂದೇಶ್ವರ (ವಿಶ್ವವಾಣಿ), ಭಾಸ್ಕರ ರೈ ಕಟ್ಟ ( ಸುದ್ದಿ ಬಿಡುಗಡೆ) , ರಘರಾಮ ನಾಯಕ್ (ಹೊಸದಿಗಂತ) ಹಾಗೂ ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ ( ಉದಯವಾಣಿ ) ಇವರು ಗೌರವ ಸನ್ಮಾನಕ್ಕೆ ಆಯ್ಕೆಯಾದವರು. ಗೌರವ ಪುರಸ್ಕಾರ 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿದೆ.


ಜ.26 ರಂದು ಬೆಳಗ್ಗೆ 10 ರಿಂದ ನಗರದ ಮೋರ್ಗನ್ಸ್ ಗೇಟ್ ಬಳಿಯ ” ಪಾಲೆಮಾರ್ ಗಾರ್ಡನ್ ” ನಲ್ಲಿ ನಡೆಯಲಿರುವ
ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಂದು ಗೌರವ ಸನ್ಮಾನ ನೀಡಲಾಗುವುದೆಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ತಿಳಿಸಿದ್ದಾರೆ.

Related Posts

Leave a Reply

Your email address will not be published.