ಎಸ್‌ಜಿಎಫ್‌ಐ ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್: ಈಜು ಸ್ಪರ್ಧೆಗೆ ಮಂಗಳಾ ಕ್ಲಬ್‌ನ 10 ಮಂದಿ ಆಯ್ಕೆ
ಇತ್ತೀಚೆಗೆ ಕರ್ನಾಟಕ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ರಾಜ್ಯಮಟ್ಟದ ಹಾಗೂ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥೆಯ ವತಿಯಿಂದ ಭೋಪಾಲ್‌ನಲ್ಲಿ ನಡೆದ ರಾಷ್ಟçಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಕ್ಲಬ್‌ನ ಸದಸ್ಯರಾದ ಚಿಂತನ್ ಎಸ್. ಶೆಟ್ಟಿ, 2 ಚಿನ್ನ, 3 ಬೆಳ್ಳಿ. ಗ್ಯಾನ್ ಡಿ 1 ಬೆಳ್ಳಿ, 1 ಕಂಚು, ವೈಷ್ಣವಿ ಕುಡ್ವ 2 ಕಂಚು, ಪೂರ್ವಿ ಎಂ 3 ಚಿನ್ನ. 1 ಬೆಳ್ಳಿ, ಚಾರ್ವಿ ಎಂ 2 ಚಿನ್ನ 2 ಬೆಳ್ಳಿ, ಪ್ರಾಪ್ತಿ ಜೆ.ಪಿ. 4 ಚಿನ್ನ, 1 ಬೆಳ್ಳಿ, ಮಿಥಾಲಿ ಭಟ್ 1 ಚಿನ್ನ, 1 ಬೆಳ್ಳಿ, ಶಿಖಾ ಬಿ. ಶೆಟ್ಟಿ 1 ಚಿನ್ನ, ಯಶ್ ರಾಜ್ ಎಸ್ 2 ಚಿನ್ನ, 2 ಬೆಳ್ಳಿ, ಪ್ರತೀಕ್ ಜೆ.ಪಿ 5 ಕಂಚು, ಕು. ಅವ್ನಿ ಡಿ 1 ಚಿನ್ನ, 2 ಬೆಳ್ಳಿ, ದೇವಿಕಾ ಎಂ.5 ಚಿನ್ನ ಪ್ರೀತಿಕಾ ಆರ್ ಖಾರ್ವಿ 2 ಬೆಳ್ಳಿ, 1 ಕಂಚು, ಕೀರ್ತನಾ ಬೇಕಲ್ 2 ಬೆಳ್ಳಿ ಪದಕಗಳನ್ನು ಗಳಿಸಿರುತ್ತಾರೆ.
ನ.2ರಿಂದ 30ರ ವರೆಗೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿರುವ 68ನೇ ಎಸ್‌ಜಿಎಫ್‌ಐ ರಾಷ್ಟçಮಟ್ಟದ ಈಜು ಸ್ಪರ್ಧೆಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಚಿಂತನ್ ಎಸ್. ಶೆಟ್ಟಿ. ಗ್ಯಾನ್ ಡಿ, ಪೂರ್ವಿ ಎಂ, ಚಾರ್ವಿ, ಪ್ರಾಪ್ತಿ ಜೆ.ಪಿ. ಯಶ್‌ರಜ್ ಎಸ್. ಅವ್ನಿ ಡಿ, ದೇವಿಕಾ ಎಂ, ಪ್ರೀತಿಕಾ ಆರ್. ಖಾರ್ವಿ ಕೀರ್ತನಾ ಬೇಕಲ್ ಆಯ್ಕೆಯಾಗಿರುತ್ತಾರೆ.
ಇವರು ಕ್ಲಬ್‌ನ ಹಿರಿಯ ತರಬೇತುದಾರ ಎಂ. ಶಿವಾನಂದ ಗಟ್ಟಿ ಅವರ ಮಾರ್ಗದರ್ಶನದಲ್ಲಿ ಮುಖ್ಯ ತರಬೇತುದಾರ ಶಿಶಿರ್ ಎಸ್. ಗಟ್ಟಿ. ತರಬೇತುದಾರರಾದ ಕೀರ್ತನ್ ಎಸ್ ಶೆಟ್ಟಿ, ಚೇತನ್ ಎಸ್. ಶೆಟ್ಟಿ, ರಾಜೇಶ್ ಖಾರ್ವಿ ಬೆಂಗ್ರೆ, ಪ್ರಥಮ್ ಕುಂದರ್ ಇವರಿಂದ ಎಮ್ಮೆಕೆರೆ ಸ್ಮಾರ್ಟ್ಸಿಟಿ ಅಂತರರಾಷ್ಟಿçÃಯ ಈಜು ಕೊಳ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.