ಪ್ರತಿಭಾ ಕುಳಾಯಿ ವಿರುದ್ದ ಅಶ್ಲೀಲ ಬರಹ ಪೋಸ್ಟ್ ಹಾಕಿದವರು ವಿರುದ್ದ ಕ್ರಮ ಕೈಗೊಳ್ಳುತ್ತೇವೆ : ಕಮೀಷನರ್
ಮಂಗಳೂರು; ಸಾಮಾಜಿಕಕಾರ್ಯಕರ್ತೆ ಪ್ರತಿಭಾ ಕುಳಾಯಿ ವಿರುದ್ಧ ಅವಹೇಳನಾಕಾರಿ ಹಾಗೂ ಅಶ್ಲೀಲವಾಗಿ ಪೆÇೀಸ್ಟ್ ಹಾಕಿದ ಆರೋಪಿಗಳನ್ನು ಶೀಘ್ರವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸತ್ತೇವೆ ಎಂದುಮಿಷನರ್ ಶಶಿಕುಮಾರ್ ತಿಳಿಸೊದ್ದಾರೆ. ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಹೋರಾಟ ಎರಡು ಮೂರಿ ದಿನದ ಹಿಂದೆ ನಡೆದಿತ್ತು, ಈ ವೇಳೆ ಮಹಿಳಾ ಹೋರಾಟಗಾರರ ಪೋಟೋಗೆ ಅಶ್ಲೀಲವಾಗಿ ಬರಹ, ಪೋಸ್ಟ್ ಬಗ್ಗೆ ದೂರುದಾಖಲಾಗಿದೆ. ಇದರಿಂದ ಅವರ ಗೌರವಕ್ಕೆ ಧಕ್ಕೆ ಬರುವುದು,ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಬಗ್ಗೆ ಆರೋಪಿಸಿದ್ದಾರೆ. ಈ ಕುರಿತ ಪ್ರಕರಣ ಮಹಿಳಾ ಠಾಣೆಗೆ ವರ್ಗಾಯಿಸಿದ್ದೇವೆ.ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ಮಾಡಿದ್ದೇವೆ. ಶೀಘ್ರವೇ ಆರೋಪಿಗಳಿಗೆ ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅವರು ಮುಖ್ಯವಾಗಿ ಓರ್ವ ವ್ಯಕ್ತಿ, ಮಾದ್ಯಮ ವಿಭಾಗದಲ್ಲಿ ಇದ್ದಾರೆ ಅವರೇ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದಲ್ಲದೆ ಇನ್ನಿತರ ಪೆÇೀಸ್ಟ್ ಬಗ್ಗೆ ಕೂಡ ತನಿಖೆ ನಡೆಸುವುದಾಗಿ ಹೇಳಿದ್ದಾರೆ.