ಶೌರ್ಯ ಮತ್ತು ವಿಪತ್ತು ತಂಡದವರಿಂದ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಕುಟುಂಬಕ್ಕೆ ಶ್ರಮದಾನದ ಮುಖಾಂತರ ಸಹಾಯ

ಸುಳ್ಯ ತಾಲೂಕಿನ ಬೆಳ್ಳಾರೆ, ಪಂಜ ಮತ್ತು ನಿಂತಿಕಲ್ಲು ವಲಯದ ಶೌರ್ಯ ಮತ್ತು ವಿಪತ್ತು ನಿರ್ವಹಣಾ ಘಟಕದ ಸುಮಾರು 30 ಮಂದಿ ಸ್ವಯಂಸೇವಕರಿಂದ ಶ್ರಮದಾನದ ಸೇವೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ವಲಯದಲ್ಲಿ ಮಹಾವಿಷ್ಣುಮೂರ್ತಿ ಸಂಘದ ಹಿರಿಯ ಸದಸ್ಯರು ಕಳೆದ 4 ವರ್ಷದಿಂದ ಶೌರ್ಯ ಮತ್ತು ವಿಪತ್ತು ಘಟಕದ ಸಕ್ರಿಯ ಸದಸ್ಯರಾದ ಮಠತಡ್ಕದ ಶ್ರೀ ಶೇಷಪ್ಪ ನಾಯ್ಕ ರವರ ಮನೆಗೆ ದಿನಾಂಕ 10/6/25 ರಂದು ವಿಪರೀತ ಮಳೆಯಿಂದ ಮನೆಯ ಹಿಂಭಾಗದಲ್ಲಿದ್ದ ಸುಮಾರು 30 ಅಡಿ ಎತ್ತರದ ಗುಡ್ಡ ಜರಿದು ಮೂರು ಕೊಠಡಿಯ ಗೋಡೆ ಬಿರುಕು ಬಿಟ್ಟು ಅಪಾರ ನಷ್ಟ ಸಂಭವಿಸಿದೆ. ಗುಡ್ಡಜರಿದ ಮಣ್ಣು ಮನೆಯ ಮೇಲೆ ಮತ್ತು ಸುತ್ತಮುತ್ತಲು ಬಿದ್ದು ಬಹಳ ಆತಂಕದ ಪರಿಸ್ಥಿತಿ ಉಂಟುಮಾಡಿದೆ.
ಈ ಸಂದರ್ಭದಲ್ಲಿ ಶೌರ್ಯ ಮತ್ತು ವಿಪತ್ತು ಘಟಕದಲ್ಲಿ ಸೈನಿಕರಂತೆ ಸೇವೆ ಮಾಡುವ ಬಳ್ಳಾರಿ ಪಂಜಾ ಮತ್ತು ನಿಂತಿಕಲ್ಲು ವಲಯದ 21ಮಂದಿ ಪುರುಷರು ಮತ್ತು 9 ಮಂದಿ ಮಹಿಳೆಯರು ವಿಪರೀತ ಬೀಳುತ್ತಿರುವ
ಮಳೆಯನ್ನು ಲೆಕ್ಕಿಸದೆ ಕಳೆದ ಎರಡು ದಿನಗಳಿಂದ ಮನೆ ಒಳಗೆ ಮತ್ತು ಹೊರಗಡೆ ಬಿದ್ದ ಮಣ್ಣನ್ನು ಹೊರ ತೆಗೆಯುವ ಶ್ರಮಸೇವೆ ನೀಡಿ ನೊಂದ ಕುಟುಂಬಕ್ಕೆ ಧೈರ್ಯ ತುಂಬಿರುತ್ತಾರೆ. ಇನ್ನು 4-5 ದಿನಗಳಲ್ಲಿ ನಿರಂತರ ಕೆಲಸ ಮಾಡಿದ್ದಲ್ಲಿ ಈಗಾಗಲೇ ಜರಿದು ಬಿದ್ದಿರುವ ಮಣ್ಣನ್ನು ಹೊರ ತೆಗೆಯಬಹುದು. ಮಣ್ಣು ಜರಿದು ಬಿದ್ದ ಪರಿಣಾಮ ರಿಪೇರಿ ಮತ್ತು ನಿರ್ವಹಣೆಗಾಗಿ ಸುಮಾರು 1,50000/- ರೂಪಾಯಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.
ಈ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡ ಭೇಟಿ ನೀಡಿ ನಷ್ಟ ಉಂಟಾದ ಕುಟುಂಬಕ್ಕೆ ಸಾಂತ್ವನವನ್ನು ಹೇಳಿ ಸೇವೆ ಮಾಡಿದ ಎಲ್ಲಾ ಶೌರ್ಯ ಮತ್ತು ವಿಪತ್ತು ಘಟಕದ ಸದಸ್ಯರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಿದರು. ವಲಯದ ಮೇಲ್ವಿಚಾರಕರದ ತೀರ್ಥರಾಮ ಸೇವಾ ಪ್ರತಿನಿಧಿಯಾದ ಪ್ರಿಯಾ, ತಿರುವಾಚೆ ಒಕ್ಕೂಟದ ಅಧ್ಯಕ್ಷರಾದಂತಹ ಶ್ರೀ ಸುಂದರ ನಾಯ್ಕರವರು ಉಪಸಿತರಿದ್ದರು.

Related Posts

Leave a Reply

Your email address will not be published.