ಅಂಕೋಲದ ಶಿರೂರಿನಲ್ಲಿ ಗುಡ್ಡ ಕುಸಿತ ಪ್ರಕರಣ,ರಸ್ತೆ ಸಂಚಾರ ಸಂಪೂರ್ಣ ಬಂದ್

ಶಿರೂರು ಟೋಲ್ ಗೇಟ್ ನಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿಂತಿರುವ ಲಾರಿ ಡ್ರೈವರ್ ಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.
ಅಂಕೋಲದ ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾದ ಹಿನ್ನಲೆಯಲ್ಲಿ, ರಸ್ತೆ ಸಂಚಾರ ಸಂಪೂರ್ಣ ಬಂದ್ ಅಗಿರುವ ಹಿನ್ನಲೆಯಲ್ಲಿ, ಉಡುಪಿ ಜಿಲ್ಲೆಯ ಶಿರೂರು ಟೋಲ್ ಗೇಟ್‌ನಲ್ಲಿ ನೂರಾರು ಲಾರಿಗಳು ಸಾಲು ಸಾಲಾಗಿ ನಿಂತುಕೊಂಡಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಲಾರಿಗಳು ಇಲ್ಲೆ ಬಾಕಿಯಾಗಿದ್ದು, ಲಾರಿ ಡ್ರೈವರ್ ಗಳ ಕೈಯಲ್ಲಿದ್ದ ಹಣ ಹಾಗೂ ಆಹಾರ ಧಾನ್ಯಗಳು ,ಗ್ಯಾಸ್ ಖಾಲಿಯಾಗಿವೆ. ಹೀಗಾಗಿ ಜಿಲ್ಲಾಡಳಿತ ಲಾರಿ ಡ್ರೈವರ್‌ಗಳ ಸಹಾಯಕ್ಕೆ ಬರುವಂತೆ ಲಾರಿ ಚಾಲಕರು ವಿನಂತಿಸಿಕೊಂಡಿದ್ದಾರೆ.
